ಮೊಳಕಾಲ್ಮುರು:-ಸಚಿವ ಡಿ ಸುಧಾಕರ್ ಭಾನುವಾರದಂದು ಹಾನಗಲ್ ಗ್ರಾಮದ ಖಾಸಗಿ ಕಾರ್ಯಕ್ರಮಕ್ಕೆಂದು ಆಗಮಿಸುವ ವೇಳೆ ಸಚಿವರ ವಿರುದ್ಧ ರೈತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನೀರಾವರಿ ಯೋಜನೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವಾಗ ಹಿರಿಯೂರು ತಾಲೂಕಿಗೆ ಮಾತ್ರ ಒತ್ತು ನೀಡಿದ್ದೀರಾ ಇನ್ನುಳಿದ 5 ತಾಲೂಕುಗಳನ್ನು ಕಡೆಗಣಿಸಿದ್ದೀರಾ ಆಂಧ್ರದಲ್ಲಿಯೂ ಮೊಳಕಾಲ್ಮೂರು ಮತ್ತು ಚಳಕೆರೆ ಭಾಗದ ಕುಡಿಯುವ ನೀರಿಗೆ ಬರವಿದೆ ಇಲ್ಲಿ ಯಾವುದೇ ಶಾಶ್ವತ ನೀರಿನ ಮೂಲಗಳಿಲ್ಲ ನೀರಾವರಿ ಯೋಜನೆ ಬಗ್ಗೆ ಮಾತನಾಡುವ ನಮ್ಮ ತಾಲೂಕುಗಳನ್ನು ಕಡೆಗಣಿಸಿರುವುದು ಈ ಭಾಗದ ರೈತರಿಗೆ ಮಾಡಿದ ದ್ರೋಹವೆಂದು ಸಚಿವ ಸಚಿವರ ವಿರುದ್ಧ ರೈತ ಸಂಘದ ಮುಖಂಡರಾದ ಬೇಡ್ರೆಡ್ಡಿಹಳ್ಳಿ ಬಸವ ರೆಡ್ಡಿ ಮತ್ತು ನಿಜಲಿಂಗಪ್ಪ ಕರೆ ಟಿಕೆಟ್ ತೆಗೆದುಕೊಂಡರು.

ಈ ವೇಳೆ ರೈತರ ಜೊತೆ ಮಾತನಾಡಿದ ಸಚಿವ ಡಿ ಸುಧಾಕರ್ ನಾನು ನೀರಾವರಿ ಅಧಿಕಾರಿಗಳ ಜೊತೆ ಮಾತನಾಡುವಾಗ ಯಾವುದೇ ತಾಲೂಕನ್ನು ಕಡೆಗಣಿಸಿಲ್ಲ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ನನ್ನ ಎರಡು ಕಣ್ಣುಗಳು ಇದ್ದಂತೆ ನಾನು ಯಾವುದೇ ತಾಲೂಕನ್ನು ಕಡೆಗಣಿಸಿಲ್ಲ ನಾನು ಇಡೀ ರಾಜ್ಯಕ್ಕೆ ಮಂತ್ರಿ ಇದ್ದೇನೆ ಹಾಗಾಗಿ ರಾಜ್ಯಕ್ಕೆ ಒಳಿತನ್ನು ಬಯಸುತ್ತೇನೆ. ಮೊಳಕಾಲ್ಮೂರು ಗಡಿಭಾಗ ಇರುವುದರಿಂದ ಈ ತಾಲೂಕನ್ನು ಹೆಚ್ಚು ಗಮನ ಹರಿಸಿ ವಿಶೇಷ ಕಾಳಜಿ ವಹಿಸುತ್ತೇನೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಬೇಡ ಅಕ್ಟೋಬರ್ ಒಳಗಾಗಿ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಜಾರಿಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರ 5,300 ಕೋಟಿ ಹೆಸರಿಗಷ್ಟೇ ಘೋಷಣೆ ಮಾಡಿದ್ದೆ, ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭದ್ರಾ ಯೋಜನೆ ಜಾರಿಯಾಗುವ ಎರಡು ಸ್ಥಳಗಳಲ್ಲಿ ರೈತರಿಂದ ತೊಂದರೆ ಉಂಟಾಗುತ್ತದೆ ಎರಡು ಕಡೆ ದುಬಾರಿ ಬೆಲೆಗೆ ಜಮೀನು ಡಿಮ್ಯಾಂಡ್ ಮಾಡುತ್ತಿದ್ದಾರೆ ಹಾಗಾಗಿ ತೊಂದರೆ ಆಗುತ್ತದೆ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಯಾವುದೇ ರಾಜಕೀಯ ಬೇಡ ಎಲ್ಲಾ ತಾಲೂಕುಗಳಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳ್ಳುವಿದೆ ಎಂದು ರೈತರಿಗೆ ಎಲ್ಲ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮಲ್ಲಳ್ಳಿ ರವಿಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ಕೆ ಖಲೀಮುಲ್ಲಾ ರೈತ ಮುಖಂಡರಾದ ಮಂಜುನಾಥ ದಾನಸೂರ ನಾಯಕ ಪರಮೇಶ್ ನೇರ್ಲಳ್ಳಿ ನಾಗೇಶ್ ಇನ್ನು ಹಲವು ರೈತರು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿ ಎಂ ಗಂಗಾಧರ




