ಸಿರುಗುಪ್ಪ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜೋಳ ಖರೀದಿಯಲ್ಲಿನ ವ್ಯತ್ಯಾಸವನ್ನು ವಿರೋಧಿಸಿ ರೈತ ಮುಖಂಡರು ಹಾಗೂ ನೂರಾರು ರೈತರಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಎಮ್.ನಾಗರಾಜ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಈಗ 10 ಕ್ವಿಂಟಾಲ್‌ನಂತೆ ಖರೀದಿ ಮಾಡಲಾಗುತ್ತಿದೆ.
ರೈತರು ತೊಂದರೆ ತೆಗೆದುಕೊಳ್ಳದೇ ನಿಮ್ಮ ಜೋಳವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬೇಕು.
ಈ ಹಿಂದೆ ನಡೆದ ಅವ್ಯವಹಾರಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಅದನ್ನು ಸರಿಪಡಿಸುವ ವ್ಯವಸ್ಥೆಯ ಜವಾಬ್ದಾರಿ ನಮ್ಮದಾಗಿರುತ್ತದೆಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ನಾವು ಈಗಾಗಲೇ ನಮಗೆ ಲಾಗಿನ್‌ನಲ್ಲಿ 20 ಕ್ವಿಂಟಾಲ್‌ನಂತೆ ಆದೇಶವಿರುತ್ತದೆ. ಆದಕಾರಣ ಜೋಳವನ್ನು ಕಳೆದ ಹಲವು ದಿನಗಳಿಂದ ಲಾರಿ, ಟೆಂಪೋ, ಟ್ರಾಕ್ಟರ್ ಮೂಲಕ ತಂದು ನಿಲ್ಲಿಸಿದ್ದೇವೆ.
ಕಳೆದ 16ನೇ ತಾರೀಖಿನಿಂದ ಬರೀ 10 ಕ್ವಿಂಟಾಲ್ ಮಾತ್ರ ಖರೀದಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಇನ್ನುಳಿದ ಜೋಳವನ್ನು ಏನು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ ಇಲ್ಲಿಗೆ ರೈತರು ಮಳೆಯಿಂದಾಗಿ ತೊಂದರೆಗೊಳಗಾಗಿದ್ದಾರೆ. ಕೆಲವರಿಗೆ 20 ಕ್ವಿಂಟಾಲ್‌ನಂತೆ ಖರೀದಿಸಿ ಏಕಾಏಕಿ 10 ಕ್ವಿಂಟಾಲ್ ಖರೀದಿಸಿದರೆ ನಷ್ಟವಾಗುತ್ತದೆಂದರು.
ಸ್ಪಷ್ಟೀಕರಿಸಿದ ಶಾಸಕರು ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಮನವಿ ಮಾಡಲಾಗುವುದು ಅಲ್ಲದೇ ಇಂತಹ ವ್ಯತ್ಯಾಸ ಮುಂದಾಗದಂತೆ ತಡೆಯಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಶಕೀನಾ, ಪ್ರಬಾರಿ ತಹಶೀಲ್ದಾರ್ ನರಸಪ್ಪ, ಹಸಿರು ಸೇನೆ ಅಧ್ಯಕ್ಷ ಮಾಧವರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಜೆ.ಸಿದ್ದರಾಮನಗೌಡ, ಟಿ.ಧರಪ್ಪ ನಾಯಕ ಇನ್ನಿತರ ರೈತ ಮುಖಂಡರು ನೂರಾರು ರೈತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




