
ಅಥಣಿ: ಕಬ್ಬಿನ ಬೆಳೆಗೆ 3500 ಬೆಲೆ ನಿಗದಿ ಮಾಡುವಂತೆ ಅಥಣಿ ಪಟ್ಟಣ ಬಂದ್ ಮಾಡಿ ರೈತರಿಂದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ರೈತರ ಹೋರಾಟ.
ಬೆಳಗಾವಿ ಜಿಲ್ಲೆಯಾದ್ಯಂತ ಹಬ್ಬಿದ ಹೋರಾಟದ ಕಿಚ್ಚು.
ಕಬ್ಬಿನ ಬೆಳೆಗೆ ನಿಗದಿತ ಬೆಲೆ ನೀಡುವಂತೆ ಆಗ್ರಹಿಸಿ ರೈತರಿಂದ ಬೃಹತ್ ಹೋರಾಟ.
ರೈತರ ಹೋರಾಟಕ್ಕೆ ಅಥಣಿ ಜನತೆಯಿಂದ ಬೆಂಬಲ.
ಅಥಣಿ ಪಟ್ಟಣ ಬಂದ್ ಮಾಡಿ ಬೆಂಬಲ ನೀಡಿದ ಅಥಣಿ ಮಂದಿ.
ಅಥಣಿ ಪಟ್ಟಣದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಬೆಂಬಲ.
ವಿಜಯಪುರ, ಸಂಕೇಶ್ವರ ಜತ್ತ ಜಾಂಬೋಟಿ ಹೆದ್ದಾರಿ ಬಂದ್ ಮಾಡಿ ರೈತರ ಆಕ್ರೋಶ.
ಹಾಲು, ಹಣ್ಣು ಆಸ್ಪತ್ರೆ, ಮೆಡಿಕಲ್, ತರಕಾರಿ ಹೊರತುಪಡಿಸಿ ಇನ್ನುಳಿದ ಎಲ್ಲವೂ ಬಂದ್.
ಸರ್ಕಾರಿ ಬಸ್ ಓಡಾಟ ರದ್ದಾಗುವ ಸಾಧ್ಯತೆ.
ಅಥಣಿ ಪಟ್ಟಣದ ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ.
ಅರವಿಂದ ದೇಶಪಾಂಡೆ ಅವರು ಮಾತನಾಡಿ ರೈತರಿಗೆ ಅವರದೇ ಆದ ಕಬ್ಬು ಬೆಳಗ್ಗೆ ರೈತರೇ ನಿಗದಿ ಮಾಡಲು ಆಗುತ್ತಾ ಇಲ್ಲ ಯಾವುದೇ ಒಂದು ಕಂಪನಿ ತನ್ನದೇ ಆದ ರೀತಿಯಲ್ಲಿ ಬೆಲೆ ಕಟ್ಟಿರುತ್ತದೆ ಅದನ್ನು ಬಿಟ್ಟು ನಾವು ಹೇಳಿದಂತೆ ಅದು ಕಂಪನಿ ಕೇಳುವುದಿಲ್ಲ ಅದೇ ರೀತಿ ರೈತರು ಅವರದೇ ಆದ ಕಬ್ಬು ಇದ್ದರು ಇನ್ನೊಬ್ಬರು ನಮ್ಮ ಕಬ್ಬಿಗೆ ಬೆಲೆ ಕೊಡಿ ಅಂತ ಕೇಳುತ್ತಾ ಇರೋದು ನಮ್ಮ ರಾಜ್ಯದ ದುರ್ದೈವ ಎಂದೇ ಹೇಳಬಹುದು ಎಂದು ಹೇಳಿದರು.
ರೈತರಿಗೆ ನಿಗದಿತ ಬೆಲೆ ಸಿಗುವವರೆಗೆ ಅಥಣಿ ಬಂದ್ ಮಾಡಿ ಪ್ರೊಟೆಸ್ಟ್ ಮಾಡುತ್ತೇವೆ ಎಂದು ಹೇಳಿರುವ ಮಾಜಿ ಶಾಸಕರಾದ ಸೇಜನ್ ಡೊಂಗರಗಾವ್. ಅಥಣಿ ತಾಲೂಕಿನ ವಕೀಲರಾದ ನಿತೇಶ್ ಪಟ್ಟಣ ಅವರು ಮಾತನಾಡಿ ರೈತರು ಬಿಸಿಲು ಮಳೆ ಎನ್ನದೆ ಗುರ್ಲಾಪುರ್ ಕ್ರಾಸ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಬೆಲೆ ನಿಗದಿ ಮಾಡಿ ಅಂತ ಹೇಳಿದರು.
ವರದಿ: ಅಜಯ ಕಾಂಬಳೆ




