ಆಲಮಟ್ಟಿ : ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಸೋಮವಾರ ಬೆಳಗ್ಗೆಯಿಂದ 26 ಗೇಟ್ ಗಳ ಮೂಲಕ ಹೊರ ಹರಿವು.
ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ ಸೋಮವಾರ ಬೆಳಗ್ಗೆ 12000 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದನ್ನು ಖಂಡಿಸಿ ರೈತರು ಜಲಾಶಯದ ಮುಂಬದಿಯಲ್ಲಿ ನೀರಿಗಿಳಿದು ಉಗ್ರವಾದ ಹೋರಾಟವನ್ನು ಮಾಡುತ್ತಿದ್ದಾರೆ.
ಕೂಡಲೇ 26 ಗೇಟುಗಳನ್ನು ನಿಲ್ಲಿಸದೇಇದ್ದಲ್ಲಿ ನೀರಿನಲ್ಲಿ ಕುಳಿತುಕೊಳ್ಳುವುದಾಗಿ ರೈತರ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನಾಗರಿಕ ಆಲಮಟ್ಟಿ ಪೊಲೀಸ ಸಿಬ್ಬಂದಿ, ಕೆಎಸ್ಐಎಫ್ ಸಿಬ್ಬಂದಿ, ನಿಡಗುಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ವರದಿ : ಅಲಿ ಮಕಾನದಾರ