ಕರಗಾಂವ,ಜೈ ಹನುಮಾನ ಏತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಗುರುವಾರ ಪಟ್ಟಣದ ಬಸವ ವೃತ್ತದ ಬಳಿ ರಸ್ತೆ ತಡೆದು ರೈತರ ಪ್ರತಿಭಟನೆ.
ಚಿಕ್ಕೋಡಿ :ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜಾರಿ ಹಾಗು ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಗುರುವಾರ ಬೆಳಗ್ಗೆ 11 ಗಂಟೆಯಿಂದ ಪಟ್ಟಣದ ಬಸವವೃತ್ತದ ಬಳಿ ಗೋಟುರು-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ, ನಿಪ್ಪಾಣಿ-ಮುಧೋಳ ರಾಜ್ಯ ರಸ್ತೆ ತಡೆದು ಸಾವಿರಾರು ರೈತರು ಪ್ರತಿಭಟನೆ ನಡೆಸಿದರು.
ಮುಧೋಳ ರಾಜ್ಯ ರಸ್ತೆ ತಡೆದು ಸಾವಿರಾರು ರೈತರು ಪ್ರತಿಭಟನೆ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರ, ಸ್ಥಳೀಯ ಶಾಸಕರ ಹಾಗು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಲಿಖಿತ ಪತ್ರದ ಭರವಸೆ ನೀಡುವಂತೆ ಪಟ್ಟು ಹಿಡಿದರು. ಮಧ್ಯಾನ್ಹ ಪ್ರತಿಭಟನಾ ಸ್ಥಳದಲ್ಲಿಯೇ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಬಳಿಕ ಸ್ಥಳಕ್ಕೆ ಚಿಕ್ಕೋಡಿ ಕರ್ನಾಟಕ ನೀರಾವರಿ ನಿಗಮ ಕಾರ್ಯನಿರ್ವಾಹಕ ಇಂಜಿನೀಯರ್ ಮಕರಂದ ಪೆಡ್ನಕರ್ ಧಾವಿಸಿ ರೈತರೊಂದಿಗೆ ಚರ್ಚಿಸಿದರು. 14 ತಿಂಗಳ ಅವಧಿಯಲ್ಲಿ
ಕರಗಾಂವ ನೀರಾವರಿ ಯೋಜನೆ ಕಾಮಗಾರಿ ಪೂರ್ಣ ಗೋಳಿಸುವದಾಗಿ ಭರವಸೆಯನ್ನು ನೀಡಿದರು.

ಇನ್ನು ಜೈ ಹನುಮಾನ ಏತನೀರಾವರಿ ಯೋಜನೆ ಡಿ.ಪಿ.ಆರ್ ಸರಕಾರಕ್ಕೆ ಕಳುಹಿಸಲಾಗಿದ್ದು ಮಂಜುರಾದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದು ಎಂದರು. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.ಬಳಿಕ ಪ್ರತಿಭಟನಾಕಾರರು ಸಂಜೆ ಪ್ರತಿಭಟನೆ ಮೊಟಕು ಗೊಳಿಸಿದರರು.
ಈ ಸಂಧರ್ಬದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ ಶಶಿಕಾಂತ ಗುರೂಜಿ ರಾಜ್ಯದ ಯಾವದೇ ಗ್ರಾಮದಲ್ಲೂ ರೈತನಿಗೆ ತೊಂದರೆಗಳಾದರೆ ನಾವು ಅವರ ಬೆನ್ನಿಗೆ ನಿಲ್ಲುತ್ತೆವೆ. ಸರಕಾರಕ್ಕೆ ಪ್ರತಿಭಟನೆಯ ಬೀಸಿ ಮುಟ್ಟಿಸಿ ರೈತರಿಗೆ ನ್ಯಾಯವದಗಿಸುವ ಕಾರ್ಯ ರಾಜ್ಯ ರೈತ ಸಂಘದಿಂದ ನಡೆಯಲಿದೆ. ನಾನು ಯಾವದೇ ಚುಣಾವನೆಗಳಿಗೆ ಸ್ಪರ್ದೇ ನಡೆಸುವದಿಲ್ಲ, ರಾಜಕಿಯ ನಾಯಕರು ಹೆದರುವ ಅವಶ್ಯಕತೆ ಇಲ್ಲ ನನ್ನ ತಂಟೆಗೆ ಬಂದವರನ್ನು ಬಿಡುವದಿಲ್ಲೆಂದು ಎಚ್ಚರಿಕೆ ವೇದಿಕೆಯಿಂದ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಚುನ್ನಪ್ಪ ಪೂಜಾರಿ ಮಾತನಾಡಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಳದಅಧಿವೇಶನದಲ್ಲಿ ಡಿ.11 ನೇತಾರೀಖಿನಂದು ಲಕ್ಷಾಂತರ ಸಂಖ್ಯೆಯಲ್ಲಿ ರೈತರ ವಿವಿದ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ಬೃಹತ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗುವದು ಸರಕಾರ ಕೂಡಲೆ ಎಚ್ಚೆತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮಿಗಳಿ ಪ್ರತಿಟನಾ ಸ್ಥಳಕ್ಕೆ ಬೇಟಿ ನೀಡಿದರು.ಪ್ರತಿಭಟನಾ ಸ್ಥಳದಲ್ಲಿ ರಾಜ್ಯ ಉಪಾಧ್ಯಕ್ಷ ಸತ್ಯಪ್ಪಾ ಮಲ್ಲಪೂರೆ, ಮನೋಜ ಮನಗುಳಿ, ತ್ಯಾಗರಾಜ ಕದಂ, ಕುಮಾರ ಮರದಿ, ಮಲ್ಲಪ್ಪಾ ಅಂಗಡಿ, ಕಾಡಗೌಡ ಪಾಟೀಲ, ಶ್ರೀಶೈಲ ಅಂಗಡಿ, ಆನಂದ ಪಾಶ್ಚಾಪೂರೆ, ಸಂಜು ಬಡಿಗೇರ ಶಿವರಾಜ ಜಿದ್ದಿಮನಿ, ಸೇರಿ ರೈತ ಸಂಘದ ಮುಖಂಡರು, ವಿವಿಧ ತಾಲೂಕಿನ ರೈತರು, ರೈತ ಮಹಿಳೆಯರು ಇದ್ದರು, ಚಿಕ್ಕೋಡಿ ನ್ಯಾಯವಾದಿಗಳು ಸಾಥ ನೀಡಿದರು. ಚಿಕ್ಕೋಡಿ ಪೋಲಿಸ ಇಲಾಖೆಯವರು ಭದ್ರತೆಯನ್ನು ಕಲ್ಪಿಸಿದರು.
ವರದಿ: ರಾಜು ಮುಂಡೆ




