——————————————-ಅರಣ್ಯಾಧಿಕಾರಿ ವಿಜಯ್ ಕುಮಾರ್ ಮನವಿ
ಸೇಡಂ: ತಾಲೂಕಿನ ಪಾಖಲಾ ಗ್ರಾಮ ವ್ಯಾಪ್ತಿಯಲ್ಲಿ ಬರುವ ಕೊಂಪಲ್ಲಿ ಅರಣ್ಯದಲ್ಲಿ ಕೆಲ ದಿನಗಳ ಹಿಂದೆ ಹಸುವಿನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಅನುಮಾನಾಸ್ಪದವಾಗಿ ಹೆಜ್ಜೆಗಳು ಸಿಕ್ಕಿರುವ ಹಿನ್ನೆಲೆ ವರದಿಯಾಗಿತ್ತು.
ಶುಕ್ರವಾರ ರಾತ್ರಿ ಸಮಯದಲ್ಲಿ ಅನುಮಾಸ್ಪದವಾಗಿ ಒಂದು ಪ್ರಾಣಿ ಕಾಣಿಸಿದ್ದು ಶನಿವಾರ ಬೆಳಿಗ್ಗೆ ಅರಣ್ಯ ಅಧಿಕಾರಿಗಳಾದ ವಿಜಯಕುಮಾರ್ ಪಿ ಬಡಿಗೇರ ಮತ್ತು ಭೀಮಣ್ಣ ಗೌಡ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ಹೆಜ್ಜೆಯ ಗುರುತುಗಳನ್ನು ಪತ್ತೆ ಹಚ್ಚಿ ಇದು ಚಿರತೆ ಹೆಜ್ಜೆ ಗುರುತುಗಳಲ್ಲ ಎಂದು ಹೇಳಿದರು.
ಆದರೂ ಸಾರ್ವಜನಿಕರು ಮತ್ತು ರೈತರು ಕಾಡಂಚಿನ ಪ್ರದೇಶಗಳಲ್ಲಿ ರಾತ್ರಿ ಸಮಯ ತಿರುಗಾಡಬಾರದು ಮತ್ತು ಯಾವುದೇ ಸಾಕು ಪ್ರಾಣಿಗಳನ್ನು ಅರಣ್ಯ ಪ್ರದೇಶಗಳ ಹತ್ತಿರಕ್ಕೆ ಬಿಡಬಾರದು ಎಂದು ಹೇಳಿದರು.
ಕೊಂಪಲ್ಲಿ ಅರಣ್ಯ ಸುತ್ತಮುತ್ತಲಿನ ಗ್ರಾಮಸ್ಥರು ಜಾಗುರುಕರಾಗಿರಬೇಕು ಮತ್ತು ಸಾಯಂಕಾಲ 6ಗಂಟೆ ನಂತರ ರೈತರು ಹೊಲಗಳಿಗೆ ಒಂಟಿಯಾಗಿ ಹೋಗಬಾರದು, ಒಂದು ವೇಳೆ ಹೋಗುವುದು ಅನಿವಾರ್ಯವಿದ್ದಾಗ ಸುಮಾರು ಇಬ್ಬರು ಇಲ್ಲವೇ ಅದಕ್ಕಿಂತ ಹೆಚ್ಚಿನ ಜನರು ಹೋಗಿ ಹಾಗೆ ಕೈಯಲ್ಲಿ ಲಾಠಿ ಇಡ್ಕೊಂಡು ತಿರುಗಾಡಬೇಕು ಎಂದು ವಿಜಯಕುಮಾರ್ ಅವರು ರೈತರಲ್ಲಿ ಜಾಗೃತಿ ಮೂಡಿಸಿದರು.
ಚಿರತೆಯನ್ನು ಸೆರೆಹಿಡಿಯಲು ಅದಕ್ಕೆ ಸಂಬಂಧಿಸಿದ ಬೋನ್ ವ್ಯವಸ್ಥೆ ಮಾಡಲಾಗಿದೆ ರೈತರು ಮತ್ತು ಸಾರ್ವಜನಿಕರು ಯಾವುದೇ ಆತಂಕ ಪಡೆಯುವ ಅವಕ್ಯತೆ ಇಲ್ಲಾ ಸಾಧ್ಯವಾದಷ್ಟು ಜಾಗೂರೂಕರಾಗಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ವಿಜಯ್ ಕುಮಾರ್ ಪಿ ಬಡಿಗೇರ, ಭೀಮಣ್ಣ ಗೌಡ, ಕಾಶಪ್ಪ, ಗ್ರಾಮಸ್ಥರು ಅಂಬರೀಶ್, ಬಾಲಸ್ವಾಮಿ ಗೌಡ ಪಾಖಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




