ಬೆಳಗಾವಿ: ಹೌದು ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲಾ ಅನ್ನ ಕೊಡುವ ರೈತರಿಗೆ ಒಂದಿಲ್ಲೊಂದು ರೀತಿಯಲ್ಲಿ ದಿನೇ ದಿನೇ ತೊಂದರೆಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ತುಂಬಾನೇ ಜಾಸ್ತಿಯಾಗಿದೆ. ಅಷ್ಟಕ್ಕೂ ಇದಕ್ಕೆ ಪೂರಕವಾಗಿ ಜಿಲ್ಲೆಯ ಬಹುತೇಕ ಹಸಿಮೆಣಸಿನಕಾಯಿ ಬೆಳೆಯುವ ರೈತರ ಪ್ರಸ್ತುತ ಪರಿಸ್ಥಿತಿ ಇದೇ ರೀತಿಯಾಗಿದೆ. ಸೂಕ್ತ ಬೆಲೆಯಿಲ್ಲದೇ ಬಿಸಿಲಿನ ನಡುವೆಯೂ ಸಾಕಷ್ಟು ಸಾಲ ಸೋಲಾ ಮಾಡಿ ಹಲವಾರು ಸಮಸ್ಯೆಗಳ ಕಷ್ಟಪಟ್ಟು ಬೆಳೆದ ಹಸಿಮೆಣಸಿನಕಾಯಿ ರೈತರ ಪ್ರಸ್ತುತ ಕಣ್ಣೀರಿನ ಕಥೆ ಕೇಳಿದ್ರೆ ಅಯ್ಯೋ ಪಾಪ ಅನಿಸುತ್ತೆ ಕಣ್ರೀ…!

ಜಿಲ್ಲೆಯ Apmc ಮಾರುಕಟ್ಟೆಯನ್ನೇ ಓವರ್ ಟೇಕ್ ಮಾಡಿ ಈ ಅಡನಾಡಿ ಬ್ರೋಕರ್ ಗಳು ನಿಗದಿ ಮಾಡಿರುವ ಪ್ರಕಾರ 1 ಕೆಜಿ ಹಸಿಮೆಣಸಿನಕಾಯಿಗೆ ಕೇವಲ 15 ರೂಪಾಯಿಯಂತೆ ಒಂದು ಮಳಕ್ಕೆ 150 ರೂಪಾಯಿ ನಿಗದಿ ಮಾಡಿ ರೈತರಿಂದ ಕೊಂಡುಕೊಂಡು ಬೇರೆ ರಾಜ್ಯಕ್ಕೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಿ ಲಾಭ ಹೊಡೆದು ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ಮೋಸ ಮಾಡುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ.

ಒಂದು ಕಡೆ ಮೊದಲೇ ಕಳಪೆ ಬೀಜ, ಗೊಬ್ಬರ, ನೀರಿನ ಅಭಾವದಿಂದ ಕಂಗೆಟ್ಟ ಹಸಿಮೆಣಸಿನಕಾಯಿ ಬೆಳೆಯುವ ರೈತರಿಗೆ ಫಸಲು ಬಂದ ಮೇಲೆ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ ವಾಗುವುದರ ಜೊತೆಗೆ ತುಂಬಾ ನಲುಗಿ ಹೋಗಿದ್ದ ರೈತರಿಗೆ ಈ ಬ್ರೋಕರ್ ಗಳ ದರ್ಬಾರ್ ನಿಂದ ಸೂಕ್ತ ಬೆಲೆಯಿಲ್ಲದೇ ಕಂಗೆಟ್ಟು ಹೋಗಿ ಸಾಲದ ಸುಳಿಯಲ್ಲಿ ಸಿಲುಕಿ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇಷ್ಟೆಲ್ಲಾ ಆದ್ರೂ ಸಹ ಈ ಬ್ರೋಕರ್ ಗಳ ಹಾವಳಿಯನ್ನು ತಪ್ಪಿಸಲು ಎ. ಪಿ.ಎಂ.ಸಿ ಅಧಿಕಾರಿಗಳು ಮಾತ್ರ ಈ ಬ್ರೋಕರ್ ಗಳ ಹಾವಳಿಯಿಂದ ಕಂಗೆಟ್ಟ ಹಸಿ ಮೆಣಸಿನಕಾಯಿ ರೈತರ ಪರವಾಗಿ ತುಟಿಕ್ ಪಿಟಿಕ್ ಅನ್ನದೆ ಇರುವುದು ನೋಡಿದ್ರೆ ಇವರು ಬ್ರೋಕರ್ ಗಳ ಜೊತೆ ಶಾಮೀಲು ಆಗಿರುವ ಶಂಕೆ ಇದೆ.
ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜುರವರು ಹಸಿಮೆಣಸಿನಕಾಯಿ ಬೆಳೆಯುವ ರೈತರ ಹೊಲಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಪರಿಶೀಲಿಸಿ ರೈತರ ಅಭಿಪ್ರಾಯ ಸಂಗ್ರಹ ಮಾಡಿ ಬೆಳಗಾವಿ ಕೃಷಿ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕ ಮಹಾದೇವಪ್ಪ ಚಬನೂರು ಅವರಿಗೆ ಕರೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಹಸಿಮೆಣಸಿನ ಬೆಳೆಯುವ ರೈತರಿಗೆ ಸೂಕ್ತ ಬೆಲೆ ಸಿಗುವುದರ ಮೂಲಕ ನ್ಯಾಯ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




