ಬಳ್ಳಾರಿ :ಕೊಡಲೆಯಿಂದ ಕೊಚ್ಚಿ ಮಲಗಿದ್ದವನನ್ನು ಹೆಣವಾಗಿಸಿದ ಮಾವ
ರಾತ್ರಿ ಮಲಗಿದ್ದವನನ್ನು ಹೆಣವಾಗಿಸಿದ ಕುಡಕ ಮಾವ ಬಸವರಾಜ್(35)
ಬಸವರಾಜ್ ಪ್ರತಿದಿನ ಕುಡಿದು ಹೆಂಡತಿ ಪದ್ಮಳನ್ನು ಬಡಿಯುತ್ತಿದ್ದ
ಇದ್ರಿಂದ ಬೇಸತ್ತ ಪದ್ಮಳ ತಮ್ಮಮಹೇಶ್ (30) ಮಾವನಿಗೆ ಬುದ್ದಿ ಹೇಳಿದ್ದಾನೆ
ನಂತರ ಅಕ್ಕನನ್ನು ಬಳ್ಳಾರಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾನೆ
ಜಗಳವಾಡಿದ ಪ್ರತಿಬಾರಿಯೂ ಸಂಸಾರ ಹಾಳಾಗುತ್ತೆ ಅಂತ ಬುದ್ದಿ ಹೇಳ ಸರಿಪಡಿಸುತ್ತಿದ್ದ
ಇದನ್ನೆ ಅಪಾರ್ಥಮಾಡಿಕೊಂಡ ಬಸವರಾಜ್ ಸ್ವಂತ ಅಳಿಯನನ್ನೆ ಕೊಲೆ ಮಾಡಿದ್ದಾನೆ
ನಿನ್ನೆ ರಾತ್ರಿಸುಮಾರು 12 ಗಂಟೆಗೆ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ
ಬಳ್ಳಾರಿ ಗ್ರಾಮೀಣ ಭಾಗದ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಘಟನೆ
ಕೊಡಲಿಯಿಂದ ಮನಬಂದಂತೆ ಕೊಚ್ಚಿ ಅಳಿಯ ಮಹೇಶ್ ನನ್ನು ಭರ್ಬರವಾಗಿ ಕೊಲೆ ಮಾಡಿದ್ದಾನೆ
ಕೊಡಲಿಯ ಏಟುಗಳು ಮಹೇಶ್ನ ದೇಹದ ತುಂಬ ಹರಡಿವೆ
ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.




