Ad imageAd image

ಅತ್ಯಾಚಾರಕ್ಕೆ ನಿರಾಕರಿಸಿದ್ದಕ್ಕೆ ಸೊಸೆಯನ್ನೇ ಕೊಲೆಗೈದ ಮಾವ

Bharath Vaibhav
ಅತ್ಯಾಚಾರಕ್ಕೆ ನಿರಾಕರಿಸಿದ್ದಕ್ಕೆ ಸೊಸೆಯನ್ನೇ ಕೊಲೆಗೈದ ಮಾವ
WhatsApp Group Join Now
Telegram Group Join Now

ರಾಯಚೂರು : ಅತ್ಯಾಚಾರಕ್ಕೆ ನಿರಾಕರಿಸಿದ್ದಕ್ಕೆ ಸೊಸೆಯನ್ನೇ ಮಾವ ಬರ್ಬರವಾಗಿ ಕೊಲೆಗೈದಿರುವ ಘಟನೆ ರಾಯಚೂರಿನ ಜುಲಮಗೇರಾ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ದುಳ್ಳಮ್ಮ (27) ಎಂದು ಗುರುತಿಸಲಾಗಿದೆ.

ಆರೋಪಿ ಈ ಮೊದಲು ಎರಡು ಮೂರು ಬಾರಿ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.ಗ್ರಾಮದ ಹಿರಿಯರು, ಕುಟುಂಬಸ್ಥರು ಆರೋಪಿ ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು.

ಆದರೂ ಈ ಬಾರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಸೊಸೆಯ ಮೇಲೆ ಅತ್ಯಾಚಾರ ಎಸಗಲು ಮಾವ ಮುಂದಾಗಿದ್ದ. ಈ ವೇಳೆ ಸೊಸೆ ನಿರಾಕರಿಸಿದ್ದರಿಂದ ಸಲಾಕೆಯಿಂದ ಆಕೆಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಘಟನೆ ಬಳಿಕ ಆರೋಪಿ ಗ್ರಾಮದಿಂದ ಪರಾರಿಯಾಗಿದ್ದಾನೆ. ಸದ್ಯ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!