ರಾಯಚೂರು: ತಂದೆಯೇ ಮಗಳನ್ನು ಹತ್ಯೆ ಮಾಡಿ ಶವವನ್ನು ಮೂಟೆ ಕಟ್ಟಿ ಕೃಷ ನದಿಗೆ ಎಸೆದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ. ಲಕ್ಕಪ್ಪ ಎಂಬಾತ ತನ್ನ ಮಗಳು ರೇಣುಕಾ (16) ಳನ್ನು ಕೊಲೆ ಮಾಡಿ ಬಳಿಕ ನದಿಗೆ ಎಸೆದಿದ್ದಾನೆ.
2024 ಸೆಪ್ಟೆಂಬರ್ ೧ರಂದು ನಡೆದ ಘಟನ ಈಗ ಬೆಳಕಿಗೆ ಬಂದಿದೆ. ಯುವಕನೊಬ್ಬನ ವಿರುದ್ಧ ದಾಖಲಾಗಿದ್ದ ಪೋಕ್ಕೂ, ಪ್ರಕರಣದ ವಿಚಾರಣೆ ವೇಳೆ ಲಕ್ಕಪ್ಪ ನ್ಯಾಯಾಲಯದಲ್ಲಿ ಸತ್ಯ ವಿಚಾರ ಹೇಳಿದ್ದು,
ಮಗಳನ್ನು ತಾವೇ ಕೊಂದಿದ್ದಾಗಿ ಬಾಯಿಟ್ಟಿದ್ದಾನೆ.
ಮಗಳು ರೇಣುಕಾಳಿಗೆ 17 ವರ್ಷವಿದ್ದಾಗ ಗ್ರಾಮದ ಅವ್ಯಜಾತಿಯ ಯುವಕ ಹನುಮಂತನನ್ನು ಪ್ರೀತಿಸುತ್ತಿದ್ದಳು. ಮದುವೆಗೆ ಕುಟುಂಬದವರು ವಿರೋಧಿಸಿದ್ದರು. ಈ ವೇಳೆ ಇಬ್ಬರೂ ಗ್ರಾಮ ಬಿಟ್ಟು ಓಡಿ ಹೋಗಿದ್ದರು. ರೇಣುಕಾ ತಂದೆ ಲಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ವಿದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹನುಮಂತನ ವಿರುದ್ಧ ಪೋಕ್ಕೂ ಹೇಸ್ ದಾಖಲಿಸಿ ಬಂಧಿಸಿದ್ದರು. ಅಲ್ಲದೇ ಹನುಮಂತ ಜೈಲು ಸೇರಿದ್ದ. ಹೀಗೆ ಜೈಲು ಸೇರಿದ ಹನಮಂತ ಕೆಲ ದಿನಗಳಲ್ಲಿ ಜಮೀನು ವಡೆದು ಬಿಡುಗಡೆಯಾಗಿದ್ದ.
ಜೈಲಿನಿಂದ ಬಿಡುಗಡೆಯಾಗಿ ಬಂದ ಹನಮಂತನ ಜೊತೆಯೇ ಮತ್ತೆ ರೇಣುಕಾ ಓಡಾಡಿಕೊಂಡಿದ್ದಳು. ಮನೆಯವರು ಎಷ್ಟೇ ಬುದ್ದಿ ಹೇಳಿದರೂ ನಾನು ಆವನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಕೋಪದ ಬರದಲ್ಲಿ ಲಕ್ಕಮ್ಮ ತನ್ನ ಮಗಳನ್ನೇ ಕೊಲೆ ಮಾಡಿದ್ದಾನ. ಹೊಲೆ ಬಳಿಕ ಶವವನ್ನು ಮೂಟೆಯಲ್ಲಿ ಕಟ್ಟಿ, ಕೃಷ್ಣಾ ನದಿಗೆ ಬಿಸಾಕಿದ್ದವಂತೆ. ಇದೀಗ ಆರೋಪಿ ಲಕ್ಷ್ಮಪ್ಪ, ನ್ಯಾಯಾಲಯದ ಮುಂದೆ ಬಾಯಿಟ್ಟಿದಾನೆ.