Ad imageAd image

ಸಿಂದಗಿ ತಾ. ಪಂ. ಸಭಾಂಗಣದಲ್ಲಿ ಗಣಕಯಂತ್ರ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಜನ್ಮ ದಿನಾಚರಣೆ

Bharath Vaibhav
ಸಿಂದಗಿ ತಾ. ಪಂ. ಸಭಾಂಗಣದಲ್ಲಿ ಗಣಕಯಂತ್ರ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಜನ್ಮ ದಿನಾಚರಣೆ
WhatsApp Group Join Now
Telegram Group Join Now

ಸಿಂದಗಿ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗಣಕಯಂತ್ರ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ರವರ ಜನ್ಮ ದಿನೊತ್ಸವವನ್ನು ಕರ್ನಾಟಕ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ಕಂಪ್ಯೂಟರ್ ಆಪರೇಟರ್ ದಿನಾಚರಣೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮು,ಜಿ, ಅಗ್ನಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು 18-19ನೇ ಶತಮಾನದಲ್ಲಿ ವಿಜ್ಞಾನಿ.ಗಣಿತ ತಜ್ಞರು.ತತ್ವಶಾಸ್ತ್ರಜ್ಞರಾದ ಚಾರ್ಲ್ಸ್ ಬ್ಯಾಬೇಜ್ ರವರು ಯುದ್ಧದ ಸಂದರ್ಭದಲ್ಲಿ ಯುದ್ಧ ಸಾಮಗ್ರಿ ಸಲಕರಣೆಗಳನ್ನು ಲೆಕ್ಕ ಪತ್ರ ಇಡಲು ತೊಂದರೆಯಾದ ಸಮಯದಲ್ಲಿ ಆವಿಸ್ಕರಿಸಿದ ತಂತ್ರವೇ ಗಣಕಯಂತ್ರ ಅದುವೇ ಇಂದಿನ ನಮ್ಮ ಇಲಾಖೆಯಲ್ಲಿ ಬಳಸಲು ಅನುಕೂಲವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ದೇವರ ಹಿಪ್ಪರಗಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಭಾರತಿ ಚಲುವಯ್ಯ. ಆಲಮೇಲ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಪರಿದ ಪಟಾಣ. ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ.ಸಹಾಯಕ ನಿರ್ದೇಶಕ ಪಂಚಾಯತ ರಾಜ ಎ,ಎ,ದುರ್ಗದ. ಶಿವಾನಂದ ಮೂಲಿಮನಿ. ಶಾಂತನಗೌಡ ನ್ಯಾಮಣ್ಣವರ. ಆಲಮೇಲ ಸಹಾಯಕ ನಿರ್ದೇಶಕ ಶ್ರೀಮತಿ ಶೋಭಾ ಮುದುಗಲ.ಗ್ರಾ ಪಂ ಅಬಿವೃದ್ಧಿ ಅಧಿಕಾರಿಗಳ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ದೊಡಮನಿ. ಕಂಪ್ಯೂಟರ ಆಪರೇಟರ ಸಂಘದ ಮೂರು ತಾಲೂಕಿನ ಅಧ್ಯಕ್ಷರಾದ ಸಂಪತಕುಮಾರ ಜೈನ.ಅಕ್ಬರ್ ಇನಾಮದಾರ.ರವಿ ಗೊಟೂರ. ಮೂರು ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು. ಕಾರ್ಯದರ್ಶಿಗಳು. ಕಂಪ್ಯೂಟರ್ ಆಪರೇಟರ. ಬಿಲ್ ಕಲೆಕ್ಟರ ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!