ತುರುವೇಕೆರೆ : ತಾಲ್ಲೂಕಿನ ತೊರೆಮಾವಿನಹಳ್ಳಿ ಮಾಳೆ ಗ್ರಾಮದ ಭಗೀರಥ ವಾಲಿಬಾಲ್ ಯೂತ್ ಕ್ಲಬ್ ವತಿಯಿಂದ ಭರತ ಹುಣ್ಣಿಮೆ ಪ್ರಯುಕ್ತ ತಾಲೂಕು ಮಟ್ಟದ ಐಡಿ ಕಾರ್ಡ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ “ಭಗೀರಥ ಕಪ್” ಅನ್ನು ಫೆಬ್ರವರಿ 01 ರಂದು ಸಂಜೆ 06 ಗಂಟೆಗೆ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ನ ಹರ್ಷ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲು ಯುವಕರೆಲ್ಲಾ ತೀರ್ಮಾನಿಸಿದ್ದು, ಗ್ರಾಮಸ್ಥರು ಅಗತ್ಯ ಸಹಕಾರ ನೀಡಿದ್ದಾರೆ. ಪಂದ್ಯಾವಳಿಗೆ ಗಣ್ಯರುಗಳು ಬಹುಮಾನದ ಪ್ರಾಯೋಜಕತ್ವ ವಹಿಸಿದ್ದಾರೆ. ಫೆಬ್ರವರಿ 01 ರಂದು ಭರತ ಹುಣ್ಣಿಮೆ ಇರುವುದರಿಂದ ಆ ಪ್ರಯುಕ್ತ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಗೆ ಭಗೀರಥ ಕಪ್ ಎಂದು ಹೆಸರಿಡಲಾಗಿದೆ ಎಂದರು.
ಪಂದ್ಯಾವಳಿಯ ವಿಜೇತರಿಗೆ ಪ್ರಥಮ 15001 ರೂ, ದ್ವಿತೀಯ 10001 ರೂ, ತೃತೀಯ 5001 ರೂ, ಚತುರ್ಥ 2001 ರೂ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಹರ್ಷ: 9686361643, ಅಜಯ್ : 8431369341, ಪ್ರವೀಣ್ : 8197944596 ಗೆ ಸಂಪರ್ಕಿಸಲು ಕೋರಿದರು.
ವರದಿ: ಗಿರೀಶ್ ಕೆ ಭಟ್




