ಕಂದಗಲ್ಲ ಗ್ರಾಮದಲ್ಲಿ ನೆಡೆದ ಮಹಿಳಾ ಪೋಷಣಾ ಕಾರ್ಯಕ್ರಮದ ಉದ್ಘಾಟನೆ.
ಕಂದಗಲ್ಲ: ಇತಿಹಾಸದುದ್ದಕ್ಕೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಧೃಢ ಸಂಕಲ್ಪದಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೋಡಿಸಿದ್ದು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕವಾಗಿ ಎಲ್ಲಾ ಕ್ಷೆತ್ರಗಳಲ್ಲಿಯೂ ಮಹಿಳೆಯರ ಸಾಧನೆಗಳು ಗಮನಾರ್ಹ ಎಂದು ನಂದವಾಡಗಿ ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸರಸ್ವತಿ ಅ ಈಟಿ ಹೇಳಿದರು.ಕಂದಗಲ್ಲ ಗ್ರಾಮದ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿನೆಡೆದ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ್,ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ,ಗ್ರಾಮ ಪಂಚಾಯತ ಕಂದಗಲ್ಲ ಮತ್ತು ಅಂಗನವಾಡಿ ಕಾರ್ಯಕರ್ತರ ಸಹಯೋಗದಲ್ಲಿ ನೆಡೆದ ಮಹಿಳಾ ಪೋಷಣಾ ಮಾಸಾಚರಣೆ ,ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.
ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಂತೇಶ್ ಕಡಿವಾಲ್ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶರಣಮ್ಮ ಭಜಂತ್ರಿ, ಸದಸ್ಯ ರಹಿಮಾನಸಾಬ ಬಾಗವಾನ, ಅರೋಗ್ಯ ಇಲಾಖೆಯ ಪ್ರಲ್ಹಾದ ಜೋಶಿ ನಂದವಾಡಗಿ ಗ್ರಾಮದ ನಾಡಗೌಡ್ರ ಮೇಡಂ, ಗ್ರಂಥಾಲಯಧಿಕಾರಿ ಶಂಕರ ಕಾಳಿ ಪ್ರಸಾದ , ಅತಿಥಿ ಗಳಾಗಿ ಆಗಮಿಸಿದ್ದರು.
ಕಂದಗಲ್ಲ ವಲಯದ ಮೇಲ್ವಿಚಾರಕರಾದ ಆರ್ ಬಿ ಗೌಡರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೀಮಂತ, ತೊಟ್ಟಿಲು, ಅನ್ನಪ್ರಾಶನ, ಹುಟ್ಟುಹಬ್ಬ, ಅಕ್ಷರ ಅಭ್ಯಾಸ, ಪ್ರತಿಭಾ ಪುರಸ್ಕಾರ, ಸನ್ಮಾನ, ಕಾರ್ಯಕ್ರಮ ಗಳು ಜರುಗಿದವು.ರಂಗೋಲಿಯಲ್ಲಿ ಹಾಕಿದ ಬಾಲ್ಯ ವಿವಾಹ ತಡೆಗಟ್ಟುವಿಕೆ, ಸೇರಿದಂತೆ ವಿವಿಧ ಚಿತ್ರಗಳು ಹಾಗೂ ಕಾಯಿಪಲ್ಲೆ ದವಸ ಧಾನ್ಯಗಳು ಪೌಷ್ಟಿಕಾoಶ ಭರಿತ ಆಹಾರಗಳು ಜನಮನಸೊರೆಗೊಂಡವು.ನಿವೃತ್ತಿ ಅಂಚಿನಲ್ಲಿರುವಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ ಗಡಿಯಣ್ಣನವರನ್ನು ವಿಶೇಷ ವಾಗಿ ಸನ್ಮಾನಿಸಲಾಯಿತು. ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಹಿರೇಮಠ್, ಸುಮಂಗಳಾ ದಾದ್ಮಿ, ನೀಲಮ್ಮ ಗುರುವಿನಮಠ್, ಮಂಜುಳಾ ಡಂಬಳ, ಕಾಜಮ್ಮ ಪರಾಸರ, ಯಂಕಮ್ಮ ದಾದ್ಮಿ, ಶರಣಮ್ಮ ಕಾಳಪ್ಪಗೌಡ್ರ, ದುರ್ಗಮ್ಮ ಚಲವಾದಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಂಗನವಾಡಿ, ಆಶಾ ಕಾರ್ಯ ಕರ್ತೆಯರು ಸಹಾಯಕಿಯರು ಉಪಸ್ಥಿತರಿದ್ದರು.
ಕಾವ್ಯ ಎನ್ ಮುದುಟಗಿ ನಿರೂಪಿಸಿದರು, ಸುಜಾತ ಸಿಂಗನಾಳ ವಂದಿಸಿದರು.ಸಾಕಷ್ಟು ಜನ ಮಹಿಳೆಯರು ಮಕ್ಕಳು ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.




