ಬೆಂಗಳೂರು : ಪಿಯುಸಿ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು ಎಲ್ಲಾ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮೂರೂ ವಿಭಾಗಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಕೊಟೂರಿನ ಇಂದು ಪಿಯು ಕಾಲೇಜಿನ ಸಂಜನಾ ಬಾಯಿ 597 ಅಂಕಗಳನ್ನು ತೆಗೆಯುವ ಮೂಲಕ ರಾಜ್ಯಕ್ಕೇ ಮೊದಲ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾಳೆ.
ಕಲಾ ವಿಭಾಗದಲ್ಲಿ ಇಟ್ಟಗಿಯ ಪಂಚಮಸಾಲಿ ಪಿಯು ಕಾಲೇಜಿನ ನಿರ್ಮಲಾ ಕಲಾ ವಿಭಾಗದಲ್ಲಿ 586 ಅಂಕ ಗಳಿಸಿದ್ದಾಳೆ. ಬೆಂಗಳೂರಿನ ಮಲ್ಲೇಶ್ವರ ಮಹಾರಾಣಿ ವಿಮನ್ಸ್ ಕಾಲೇಜಿನ ಜಿಯದರ್ಶಿನಿ 595 ಅಂಕ ಗಳಿಸಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ದೀಪಶ್ರೀ 599, ಪಿರಿಯಾಪಟ್ಟಣದ ಭಾರತ್ ಮಾತಾ ಕಾಲೇಜಿನ ಎಂ ಎ ತೇಜಸ್ವಿನಿ 598, ಹಾಗೂ ಕೋಲಾರದ ಮಹಿಳಾ ಸಮಾಜದ ಪಿಯುಸಿ ಕಾಲೇಜಿನ ಎಚ್‌ಬಿ ಭಾರ್ಗವಿ – 597 ಗಳಿಸುವ ಮೂಲಕ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ – 599, ಕಾರ್ಕಳದ ಜ್ಞಾನಸುಧಾ ಕಾಲೇಜಿನ ಆಸ್ತಿ ಶೆಟ್ಟಿ – 596 ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಭೂಮಿಕ ಆರ್ ಹೆಗ್ಡೆ – 595 ಗಳಿಸುವ ಮೂಲಕ ಮೊದಲ ಮೂರು ಸ್ಥಾನ ಪಡೆದಿದ್ದಾರೆ.