Ad imageAd image

ಭಾವೈಕ್ಯತೆ ಮೆರೆಯುವ ಹಬ್ಬ ಮೊಹರಂ ಆಚರಣೆ

Bharath Vaibhav
ಭಾವೈಕ್ಯತೆ ಮೆರೆಯುವ ಹಬ್ಬ ಮೊಹರಂ ಆಚರಣೆ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ : ಮೊಹರಂ ಹಬ್ಬ ಬಂತೆಂದರೆ ಸಾಕು ಕೇವಲ ಮುಸಲ್ಮಾನರು ಮಾತ್ರವಲ್ಲದೆ ಹಿಂದೂ ಜನರು ಸೇರಿಕೊಂಡು ಭಾವೈಕ್ಯತೆ ಮೆರೆಯುವ ಹಬ್ಬ ಮೊಹರಂ ಹಬ್ಬ. ಇನ್ನು ಮೊಹರಂ ಹಬ್ಬವನ್ನು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಹಿಂದೂ-ಮುಸಲ್ಮಾನರು ಎಲ್ಲರೂ ಒಟ್ಟಿಗೆ ಸೇರಿಕೊಂಡು ಈ ಹಬ್ಬವನ್ನು ಆಚರಿಸುತ್ತಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಿದ್ದಸಮುದ್ರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮೊಹರಂ ಹಬ್ಬವನ್ನು ಹಿಂದೂ-ಮುಸಲ್ಮಾನರೆಲ್ಲರೂ ಸೇರಿಕೊಂಡು ಅತಿ ವಿಜೃಂಭಣೆಯಿಂದ ಆಚರಿಸಿದ್ದಾರೆ. ಮೋರಂ ಹಬ್ಬದಲ್ಲಿ ಯುವಕರಿಗಂತು ಎಲ್ಲಿಲ್ಲದ ಸಡಗರ ಸಂಭ್ರಮ. ಹೌದು, ಯುವಕರು ಕಾಲಿಗೆ ಗೆಜ್ಜೆ ಕಟ್ಟಿ, ತಲೆಗೆ ರಿಬ್ಬನ್ ಕಟ್ಟಿ ಕೋಲಾಟ ಆಡುವುದಂತೂ ಬಲುರೋಚಕ. ಅದರಂತೆ ಊರಿನ ಹಿರಿಯರು ಕೂಡ ಜನಪದ ಮತ್ತಿತರ ಹಾಡುಗಳನ್ನು ಹೇಳುತ್ತಾ ಈ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ.
ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.

ಇನ್ನು ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಹಾಕಿ ಕುಣಿದು ಕುಪ್ಪಳಿಸುತ್ತಾರೆ.ಗ್ರಾಮದ ಜನರು ಎರಡು ಡೋಲಿಗಳಿಗೆ ಸಕ್ಕರೆ ನೈವಿದ್ಯ ನೀಡಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.

ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!