Ad imageAd image

ಕಾನೂನಿನ ನಿಯಮ ಪಾಲಿಸುತ್ತ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು : PSI ಕಿರಣ ಮೊಹಿತೆ

Bharath Vaibhav
ಕಾನೂನಿನ ನಿಯಮ ಪಾಲಿಸುತ್ತ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು : PSI ಕಿರಣ ಮೊಹಿತೆ
WhatsApp Group Join Now
Telegram Group Join Now

ಗೋಕಾಕ : ತಾಲೂಕಿನ ಕೊಣ್ಣೂರ ಪಟ್ಟಣದ ಜಾಮಿಯಾ ಮಸಿದಿಯ ಆವರಣದಲ್ಲಿ ಗೋಕಾಕ ಡಿ,ಎಸ್,ಪಿ, ನೀರ್ದೇಶನದಂತೆ ಸಿ,ಪಿ,ಆಯ್, ಮಾರ್ಗದರ್ಶನದಲ್ಲಿ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ಹೋಳಿ ಹಬ್ಬ ಮತ್ತು ರಮಜಾನ ಪ್ರಯುಕ್ತ ಶಾಂತಿ ಸಭೆಯನ್ನ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮೀಣ ಪೋಲಿಸ ಠಾಣೆಯ ಪಿ,ಎಸ್,ಆಯ್,ಕಿರಣ ಮೊಹಿತೆಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಹೋಳಿ ಮತ್ತು ರಂಜಾನ್ ಹಬ್ಬಗಳನ್ನು ಎಲ್ಲೆಡೆ ಆಚರಿಸುತ್ತಿದ್ದಾರೆ.ಯುವಕರು ಮತ್ತು ಮುಸ್ಲಿಂ ಸಮುದಾಯದವರು ಹಬ್ಬಗಳನ್ನು ಆಚರಿಸುವಾಗ ಸರ್ಕಾರದ ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಎರಡು ಸಮುದಾಯದವರು ನಡೆದುಕೊಳ್ಳಬೇಕು.

ಅಸಭ್ಯವಾಗಿ ವರ್ತಿಸಿದವರನ್ನು ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದವರನ್ನು ನಿರ್ದಾಕ್ಷಣವಾಗಿ ಅವರ ವಿರುದ್ಧ ಕ್ರಮ ಜರಗಿಸಲಾಗುವುದು. ದಯಮಾಡಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಬಣ್ಣ ಎರಚಬಾರದು, ಎಲ್ಲರೂ ಆಚರಿಸುವಂತಹ ಹಬ್ಬವನ್ನು ಶಾಂತಿಯುತವಾಗಿ.ಅರ್ಥಗರ್ಭಿತವಾಗಿ ಆಚರಿಸಲು ಮನವಿ ಮಾಡಿ ಹೋಳಿ ಹಬ್ಬದ ನೇಪದಲ್ಲಿ ಹಣ ವಸೂಲಿ ಮಾಡಬಾರದು ಎಂದರು.

ಅದರ ಜೊತೆಯಲ್ಲಿ ಸೊಸಿಯಲ್ ಮಿಡಿಯಾ ಅನುಸರಿಸುವವರು ಯಾರೊ ಗೊತ್ತಿಲ್ಲದ ವ್ಯಕ್ತಿ ಒಂದು ಧರ್ಮದ ವಿರುದ್ದ ಅವಹೇಳನಕಾರಿ ಪೊಸ್ಟ ಮಾಡಿದ್ದನ್ನು ನೋಡದೆ ಒದದೆ ಅನವಶ್ಯವಾಗಿ ಪೋಸ್ಟ ಮಾಡಬೇಡಿ, ಒಂದು ವೇಳೆ ಉದ್ದೇಶ ಪೂರ್ವಕವಾಗಿ ಪೊಸ್ಟ ಮಾಡಿದರೆ ಅಂತವರ ವಿರುದ್ದ ಯಾವುದೆ ಮುಲಾಜಿಲ್ಲದೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಮುಸ್ಲಿಂ ಸಮದಾಯದ ಮೌಲ್ವಿ ಪರವೇಜ ನಾಯಕ ಮಾತನಾಡಿ ಹೋಳಿ ಹಬ್ಬ ಆಚರಿಸುವವರು ರಸ್ತೆ ಮೇಲೆ ಹಾಯ್ದುಹೋಗುವಂತಹ ಮಹಿಳೆಯರಿಗೆ,ಪುರುಷರಿಗೆ ಬಣ್ಣ ಎರಚದೆ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು,ಮುಸ್ಲಿಂ ಸಮುದಾಯದವರು ವಿನಾಕಾರಣ ಬಣ್ಣ ಆಡುವ ಸಮಯದಲ್ಲಿ ಹೊರಗಡೆ ಬರಬಾರದೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಕೊಣ್ಣೂರ ಪುರಸಭೆಯ ಅದ್ಯಕ್ಷ ವಿನೋದ ಕರನಿಂಗ, ಮಾಜಿ ಅದ್ಯಕ್ಷ ದನ್ಯಕುಮಾರ ಮೇಗೇರಿ,ಮುಖಂಡ ಪ್ರವೀಣ ಗುಡ್ಡಾಕಾಯು ಸಿಬ್ಬಂದಿಗಳಾದ ನಾಗೇಶ ದುರದುಂಡಿ, ಹಣಮಂತ ಗೌಡಿ ಸೇರಿದಂತೆ ಊರಿನ ಪ್ರಮುಖರು,ಯುವಕರು ಹಿರಿಯರು ಭಾಗಿಯಾಗಿದ್ದರು,

ವರದಿ : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!