ಬೆಂಗಳೂರು : ಬೆಂಗಳೂರಿನ ತಾಜ್ ಲೇಔಟಿನ ಇಸ್ಲಾಂ ಧರ್ಮ ನಿವಾಸಿಗಳ ಮೂರು ದಶಕಗಳ ಕನಸು ನೂರಿ ಫೌಂಡೇಷನ್ ಮತ್ತು ಇಸ್ಲಾಂ ಧರ್ಮದ ಮುಖಂಡರು ಇವತ್ತು ನನಸು ಮಾಡಿದ್ದಾರೆ ಎಂದು ಇಸ್ಲಾಂ ಸಮುದಾಯದ ಮುಖಂಡ ಹಾಗೂ ಶ್ರೇಷ್ಠ ಉದ್ಯಾಮಿ ಬಾಬಾ ಶೇಟ್ ಹೇಳಿದರು.

ಅವರು ತಾಜ್ ಲೇಔಟಿನಲ್ಲಿ ನೂತನವಾಗಿ ನಿರ್ಮಿಸಿದ “ಮಸ್ಜಿದ್ ಎ ಘಾಸ್ ಉಲ್ ವರ್” ತಾಜ್ ಲೇಔಟಿನ ಇಸ್ಲಾಂ ಧರ್ಮದ ಮುಖಂಡರು ಮತ್ತು ನೂರಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಸ್ಜಿದ್ ಉದ್ಘಾಟನೆ ಮತ್ತು ದಾಸರಹಳ್ಳಿ ಇಸ್ಲಾಂ ಸಮುದಾಯದ ಯುವ ಮುಖಂಡ ಜಾಫರ್ ಅವರು ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟಂತೆ ಗ್ರಂಥಾಲಯಕ್ಕೆ ಪುಸ್ತಕಗಳು ಕೊಟ್ಟಿದ್ದು ಸಂತೋಷ್ ಅದನ್ನು ಸಮುದಾಯದ ಜನರು ಮತ್ತು ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಾಬಾ ಶೇಟ್ ಜನರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗೌರವಾನ್ವಿತ ಸಭಾಪತಿ ಷಹಜ ಈ ಗೌಸ್, ಅಜರ ಪೀರ್ ತಕ್ವತ್ ರೆಹಬರ್ ಈ, ಶರಿಯತ್ ಅಬ್ದುಲ್ ಇಸಾನ್ ಹಜರತ್, ಅಲ್ಲಂ ಮೌಲಾನ್, ಸೈಯದ್ ಮೊಹಮದ್ ರಾಜ್, ಉಲ್ಲಾಹಕ್ ಅಮೀರ್, ಅಲಮೀನ್ ಷ ,ಅಮಿನ್ ಹುಸೇನ್ ,ಉಲ್ ಹುಸೇನ್ ,ಕ್ರಿಸ್ಟಿವಲ್ ಕ, ಉಲ್ ಖಾದಿರಿ, ಜಪಾನಿ ವಿಲ್ ಜಲನಿ, ಸಾಜತ್ ನಸಿನ್ ,ಸುಶೀಲ ಅಮೀನಿ ಚೆನ್ನೈ, ಯುವ ಮುಖಂಡ ವಾಸೀಮ್ ಸೇರಿದಂತೆ ಇಸ್ಲಾಂ ಧರ್ಮದ ಮುಖಂಡರು ವಿವಿಧ ಕಡೆಯಿಂದ ಇಸ್ಲಾಂ ಮುಖಂಡರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




