ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್ ಅವರನ್ನು ಭೇಟಿಯಾದ ಬೆಳಗಾವಿ ಹಣಬರ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶೀತಲ್ ಮುಂಡೆ
ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ ರವರನ್ನು ಬೆಂಗಳೂರಿನ ಶಾಸಕರ ಭವನದಲ್ಲಿ ಭೇಟಿ ಮಾಡಿ ಇತ್ತೀಚಿಗೆ ನಡೆದ ಬೆಳಗಾವಿ ಜಿಲ್ಲಾ ಯಾದವ ಹಣಬರ ಸಂಘ ಶತಮಾನೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಲು ಪ್ರಮುಖ ಪಾತ್ರ ವಹಿಸಿದ ಡಿ. ಟಿ. ಶ್ರೀನಿವಾಸರವರಿಗೆ ವಿಶೇಷವಾಗಿ ತುಂಬು ಹೃದಯದ ಸ್ವಾಗತವನ್ನು ಕೋರಲಾಯಿತು.
ಹಾಗೂ ಚಿಕ್ಕೋಡಿ ನಗರ ದಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಪ್ರಮುಖ ಹಣಬರ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




