Ad imageAd image

 ಲೋಕಾರ್ಪಣೆಗೆ ಸಿದ್ದವಾದ ಯಳಂದೂರಿನ ಶ್ರೀ ಭೂ ಲಕ್ಷ್ಮೀ ವರಹಸ್ವಾಮಿ ದೇವಸ್ಥಾನ

Bharath Vaibhav
 ಲೋಕಾರ್ಪಣೆಗೆ ಸಿದ್ದವಾದ ಯಳಂದೂರಿನ ಶ್ರೀ ಭೂ ಲಕ್ಷ್ಮೀ ವರಹಸ್ವಾಮಿ ದೇವಸ್ಥಾನ
WhatsApp Group Join Now
Telegram Group Join Now

ಯಳಂದೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಶ್ರೀ ಭೂ ಲಕ್ಷ್ಮೀ ವರಹಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸೇವಾ ಸಮತಿ ವತಿಯಿಂದ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಶಶಿಕಲಾ ರಮೇಶ್ ರವರ ಅದ್ಯಕ್ಷತೆಯಲ್ಲಿ ಪೂರ್ವಸಭೆಯನ್ನು ಹಮ್ಮಿಕೊಳ್ಳಲಾಯಿತು.

ಸಭೆಯಲ್ಲಿ ಸರ್ವಸದಸ್ಯರ ಸಮ್ಮುಖದಲ್ಲಿ ಪ್ರಮುಖ ವಿಷಯಗಳಾದ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಭೂ ಲಕ್ಷ್ಮೀ ವರಹ ಸ್ವಾಮಿ ದೇವಸ್ಥಾನದ ಲೋಕಾರ್ಪಣೆಗೆ ಆಗಸ್ಟ್ 09, 10,11 ನೇ ತಾರೀಕನ್ನು ಗೊತ್ತುಪಡಿಸಲಾಯಿತು.ನಂತರ ಪೂಜೆ ವಿಧಿವಿಧಾನಗಳು, ಅನ್ನಸಂತರ್ಪಣೆ, ವೇದಿಕೆ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.ನಂತರ ಮುಖಂಡರು ಕಾರ್ಯಕ್ರಮ ಯಶಸ್ವಿಗೆ ಸಲಹೆ ಸೂಚನೆಗಳನ್ನು ನೀಡಿದರು.ಗಣ್ಯರಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಯಿತು.ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಸಮಿತಿ ವತಿಯಿಂದ ವಂದನೆ ಸಲ್ಲಿಸಿಸಲಾಯಿತು. ಶ್ರೀ ಭೂ ಲಕ್ಷ್ಮೀ ವರಹಸ್ವಾಮಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲು ಸರ್ವಜನಿಕರೆಲ್ಲರೂ ಸಹಕರಿಸಿ ಎಂದು ಸೇವಾ ಸಮಿತಿಯಿಂದ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಭೂ ಲಕ್ಷ್ಮೀ ವರಹಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರು, ಗೌರವ ಅಧ್ಯಕ್ಷರು, ಸಲಹಗಾರರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.

ವರದಿ:  ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!