ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ.
ಚೇಳೂರು : ವಿರೋಧ ಪಕ್ಷದವರು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ರವರ ಮೇಲೆ ಇಲ್ಲಸಲ್ಲದ ಆರೋಪಗಳು ಮಾಡಿದ್ರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಪಿ ಆರ್ ಚಲಂ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಹೆಚ್ ವಿ ಎನ್ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ಮುಖಂಡರು ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಎಚ್ ವಿ ನಾರಾಯಣ ಸ್ವಾಮಿ ಮಾತನಾಡಿದ ಅವರು
ಚೇಳೂರು ತಾಲೂಕು ಕಚೇರಿಗೆ ಸ್ಥಳ ಗುರುತಿಸಿರುವ ವಿಚಾರವಾಗಿ ಚೇಳೂರು ತಾಲೂಕಿನಲ್ಲಿ ಶಾಸಕ ವಿರುದ್ಧ ಪ್ರತಿಭಟನೆ ನಡೆಸಿರುವುದು ಯಾವ ಪರುಷಾರ್ಥಕ್ಕಾಗಿ,ಚೇಳೂರು ತಾಲೂಕು ಕೇಂದ್ರದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಹೊರಗಿ ನ ಪ್ರದೇಶದಲ್ಲಿ ಸಾರ್ವಜನಿಕರ ಹಾಗೂ ರೈತರ ಅನುಕೂಲಕ್ಕಾಗಿಯೇ ತಾಲೂಕು ಕಚೇರಿಗೆ ಜಮೀನು ಗುರುತಿಸಲಾಗಿದೆ ಹೊರತು ಶಾಸಕರ ಸ್ವಂತಕ್ಕೆ ಅಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ dss ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣಪ್ಪ ಮಾತನಾಡಿ ಶಾಸಕರು ತಾಲೂಕಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಸತಿ ನಿಲಯಗಳು ನಿರ್ಮಿಸಿದ್ದಾರೆ ಹಾಗೂ ಹಲವು ದಶಕಗಳಿಂದ ಚೇಳೂರು ನಿಂದಾ ಚಿಲಕಲನೇರ್ಪು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಹದಗೆಟ್ಟಿತ್ತು,ಈ ರಸ್ತೆಯ ಮದ್ಯದಲ್ಲಿ ಸುಮಾರು ಎರಡು ಕಿಲೋಮೀಟರ್ ಆಂಧ್ರಕ್ಕೆ ಸೇರುತ್ತದೆ,ಮತ್ತೊಂದು ಕಡೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ಇದನ್ನು ಅಬಿವೃದ್ಧಿ ಮಾಡುವಲ್ಲಿ ಯಾರೊಬ್ಬರೂ ಮುಂದೆ ಬರಲಿಲ್ಲ ಆದರೆ ಶಾಸಕ ಸುಬ್ಬಾರೆಡ್ಡಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಹಲವು ದಶಕಗಳಿಂದ ಮೂಲೆಗುಂಪಾಗಿದ್ದ ರಸ್ತೆಗೆ ಮುಕ್ತಿಯನ್ನು ಕೊಟ್ಟಿದ್ದಾರೆ ಎಂದು ಶಾಸಕರ ಅಭಿವೃದ್ಧಿಗಳ ಕೆಲಸಗಳ ಕುರಿತು ವಿವರಿಸಿದರು.
ಪ್ರಗತಿ ಪರ ರೈತ ಸಹದೇವ ರೆಡ್ಡಿ ಮಾತನಾಡಿ ಬಾಗೇಪಲ್ಲಿ ಕ್ಷೇತ್ರಕ್ಕೆ ಚುನಾವಣೆ ಸಮಯದಲ್ಲಿ ಕೆಲವು ರಾಜಕೀಯ ನಾಯಕರು ವಲಸೆ ಬರುತ್ತಿದ್ದಾರೆ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕರ ಮೇಲೆ ಇಲ್ಲಸಲ್ಲದ ಟೀಕೆ ಮತ್ತು ಆರೋಪಗಳೂ ಮಾಡುತ್ತಿದ್ದಾರೆ,ಇವರಿಗೆ ಮತದಾರರು ಈಗಾಗಲೇ ಬುದ್ಧಿ ಹೇಳಿದ್ದಾರೆ ಆದರೂ ಸುಳ್ಳು ಆರೋಪಗಳೂ ಮಾಡುವುದು ನಿಲ್ಲಿಸಿಲ್ಲ ಎಂದರು.

ಚೇಳೂರಿನ ಹೊರವಲಯದಲ್ಲಿ ತಾಲೂಕು ಕಚೇರಿ ನಿರ್ಮಾಣ ವಾಗುತ್ತಿರುವ ಜಾಗದ ಪಕ್ಕದಲ್ಲಿ
ಶಾಸಕರು ಬೇನಾಮಿ ಹೆಸರಿನಲ್ಲಿ ಭೂಮಿ ಕರೀರಿಸಿದ್ದಾರೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಏಕೆಂದರೆ ಸತತ ಮೂರುಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಕ್ಷೇತ್ರದಲ್ಲಿ ಅಬಿವೃದ್ಧಿ ಮಾಡಲಿಲ್ಲ ಎಂದರೆ ಮತದಾದರು ಗೆಲ್ಲಿಸಲು ಸಾದ್ಯವೇ ಎಂದು ತಾಲೂಕು ಪಂಚಾಯತಿ ಮಾಜಿ ಸದಸ್ಯರು ಚಿನ್ನ ರೆಡ್ಡಿ ವಿರೋಧ ಪಕ್ಷದವರಿಗೆ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜೆ ಎನ್ ಜಾಲಾರಿ,ಸುರೇಂದ್ರ,ಸಾವುಕರ ಶ್ರೀನಿವಾಸ್,ರಾಮೋಜಿಪಲ್ಲಿ ಶ್ರೀನಿವಾಸ್,ಸಹದೇವ ರೆಡ್ಡಿ, ಚಾಕವೇಲು ಶೇಖರ್ ರೆಡ್ಡಿ,ಹೋಟೆಲ್ ಪಾತಿಮಾ,ಮೆಕ್ಯಾನಿಕ್ ನಯಾಜ್,ಕೆಜಿ ವೆಂಕಟರವಣಪ್ಪ, ಸಾದಿಕ್ ಬಾಷಾ,ಭಾನುಪ್ರಕಾಶ್,ಸೇರಿದಂತೆ ಇತರರು ಹಾಜರಿದ್ದರು.
ವರದಿ :ಯಾರಬ್. ಎಂ.




