ಮಹಾರಾಷ್ಟ್ರ :ಮಳೆಯಲ್ಲೂ ನಿಲ್ಲದ ಭಕ್ತರ ದಂಡು ಕೊಲ್ಲಾಪುರದ ಮಹಾಲಕ್ಮಿ ಗೆ ನವರಾತ್ರಿ ಉತ್ಸವದ ಐದನೇ ದಿನ ತಾಯಿ ಭುವನೇಶ್ವರಿ ರೂಪದಲ್ಲಿ ಅಲಂಕಾರ ಪೂಜೆ.
ಮೂರುವರೆ ಶಕ್ತಿ ಪೀಠಗಳಲ್ಲಿಯ ಒಂದಾದ ಕೊಲ್ಲಾಪುರದ ಮಹಾಲಕ್ಷ್ಮಿಗೆ ಶಾರದೆಯ ನವರಾತ್ರಿ ಉತ್ಸವದ 5 ನೇ ದಿನವೂ ಶುಕ್ರವಾರಮಹಾಲಕ್ಮಿ ಗೆ ಸಂಜೆ ತಾಯಿ ಭುವನೇಶ್ವರಿ ರೂಪದಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಪ್ರಸಕ್ತ ವರ್ಷ ನವರಾತ್ರಿ ಉತ್ಸವದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 11 ವಿವಿಧ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯಲಿದ್ದು 5 ಅಲಂಕಾರ ಪೂಜೆ ಪೂರ್ಣಗೊಂಡಿದ್ದು ಇನ್ನುಳಿದ 6 ಅಲಂಕಾರ ಪೂಜೆಗಳಲ್ಲಿ ಸಪ್ಟೆಂಬರ್ ದಿನಾಂಕ 30 ಹಾಗೂ ಅಕ್ಟೋಬರ್ 1ರಂದು ಮಹಾಜಾಗರಣೆ ಮತ್ತು ದಿನಾಂಕ 2 ವಿಜಯಾದಶಮಿಯ ದಿನ ರಥದಲ್ಲಿ ಅಸಿನಳಾದ ಮಹಾಲಕ್ಮೀ ಗೆ ವಿಶೇಷ ಪೂಜೆ ನಡೆಯಲಿದೆ.
ಉತ್ಸವದ 5 ನೇ ದಿನವೂ ಸುರಿಯುತ್ತಿರುವ ಮಳೆಯಲ್ಲೂ ಸಾವಿರಾರು ಭಕ್ತರು ಆಗಮಿಸಿ ಕುಂಕುಮಾರ್ಚನೆ ಕಾಯಿ ಕರ್ಪೂರ ನೈವೇದ್ಯದೊಂದಿಗೆ ದೇವಿಯ ದರ್ಶನ ಪಡೆದರು. ಇದುವರೆಗೆ ಕರ್ನಾಟಕ ಮಹಾರಾಷ್ಟ್ರ ಗೋವಾ, ಆಂದ್ರ ಸೇರಿದಂತೆ ವಿವಿಧ ರಾಜ್ಯಗಳಿಂದ 2 ಲಕ್ಷಕ್ಕೂ ಅಧಿಕ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದಿ ದ್ದಾರೆಂದು ಮಹಾಲಕ್ಷ್ಮಿ ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ. ಹಾಗಾದರೆ ಬನ್ನಿ ವೀಕ್ಷಕರೇ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಮಹಾಲಕ್ಷ್ಮಿಯ ನವರಾತ್ರಿ ಉತ್ಸವದ 5 ನೇ ದಿನದ ಅಲಂಕಾರ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳೋಣ.
ವರದಿ;ಮಹಾವೀರ ಚಿಂಚಣೆ




