Ad imageAd image

ಗುಜರಿ ವ್ಯಾಪಾರಿ ಜಮೀರ್ ಮೇಲೆ ಹಲ್ಲೆ ವಲಿಬಾಷಾ ವಿರುದ್ಧ ಪ್ರಕರಣ ದಾಖಲು

Bharath Vaibhav
ಗುಜರಿ ವ್ಯಾಪಾರಿ ಜಮೀರ್ ಮೇಲೆ ಹಲ್ಲೆ ವಲಿಬಾಷಾ ವಿರುದ್ಧ ಪ್ರಕರಣ ದಾಖಲು
WhatsApp Group Join Now
Telegram Group Join Now

ಸಿಂಧನೂರು : ಹಣದ ವ್ಯವಹಾರದ ಕಾರಣಕ್ಕಾಗಿ ನಗರದ ಜನತಾ ಕಾಲೋನಿಯ ಗುಜರಿ ವ್ಯಾಪಾರಿ ಜಮೀರ್ ಎನ್ನುವ ವ್ಯಕ್ತಿಯ ಮೇಲೆ ನಗರದ ಹಿರೇಹಳ್ಳ ಪಕ್ಕದ ಸಿತಾರ್ ಫಾರ್ಮ್ ಕೋಳಿ ವ್ಯಾಪಾರಿ ವಲಿಬಾಷಾ ಹಲ್ಲೆ ಎಸಗಿದ್ದಾರೆ ಎಂಬ ಆರೋಪದಡಿ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಧನೂರು ಮಾರ್ಚ್ 25 ಮಂಗಳವಾರದ ರಾತ್ರಿ 9 ಗಂಟೆಯ ಸುಮಾರಿಗೆ ಜನತಾ ಕಾಲೊನಿ ಯಲ್ಲಿರುವ ತಮ್ಮ ಮನೆಯಲ್ಲಿ ಊಟ ಮುಗಿಸಿ ಹೆಂಡತಿ ಮತ್ತು ಮಕ್ಕಳ ಜೊತೆ ಕುಳಿತುಕೊಂಡಿದ್ದ ಸಂದರ್ಭದಲ್ಲಿ ವಲಿ ಬಾಷಾ ಮುಖಣ್ಣಿಸಾಬ್ ಅಕ್ರಮ ಕೂಟ ಕಟ್ಟಿಕೊಂಡು ಏಕಾಏಕಿ ಮನೆಯೊಳಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೈ ಮೇಲಿನ ಬನಿಯನ್ ಹರಿದು,
ಎಳೆದಾಡಿ ಮನಸೋ ಇಚ್ಛೆ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎಡಗೈನ ರಟ್ಟೆಗೆ ಚಾಕು ತಗುಲಿ ನನಗೆ ಗಾಯ ವಾಗಿದೆ.

ಇದರಿಂದ ಭಯಭೀತರಾದ ನನ್ನ ಹೆಂಡತಿ, ಮಕ್ಕಳು ಕಿರುಚಾಡುತ್ತಿದ್ದಂತೆ ಅಕ್ಕಪಕ್ಕದ ಜನರು ಬಂದು ಜಗಳ ಬಿಡಿಸಿದ್ದಾರೆ. ನಂತರ ವಲಿಬಾಷಾ ಮತ್ತು ಆತನ ಸಂಗಡಿಗರು ಅಲ್ಲಿಂದ ಪರಾರಿ ಯಾಗಿದ್ದಾರೆ. ಕಾರಣ ನನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿರುವ ವಲಿಬಾಷಾ ಮತ್ತು ಆತನ ಸಂಗಡಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಜರು ಗಿಸಬೇಕು, ನನಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಗುಜರಿ ವ್ಯಾಪಾರಿ ಜಮೀರ್ ಅತಾವುಲ್ಲಾಸಾಬ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವರದಿ  : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!