ಬಳ್ಳಾರಿ: ದಂಧೆ, ಮಟ್ಕಾ ಮರಳು ಗರಸು ಸಮಾಜ ವಿರೋಧಿ ಚಟುವಟಿಕೆ, ಕಾನೂನು ಬಾಹಿರ ಚಟುವಟಿಕೆ ಹಾಗೂ ಸಮಾಜದ ಪರವಾಗಿ ಪತ್ರಿಕೆಯಲ್ಲಿ ಸುದ್ದಿ ಮಾಡುತ್ತಿದ್ದರೆ ನಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲು ಮಾಡಿ ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರಕರ್ತ ಶ್ರೀನಿವಾಸ್ನಾಯ್ಕ ಅವರು ಆರೋಪಿಸಿದರು.
ಗುರುವಾರ ಎಸ್ಪಿ ಕಚೇರಿಯ ಹತ್ತಿರ ಮಾತನಾಡಿದ ಅವರು, ನಾನು ಹಲವಾರು ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸಮಾಜದಲ್ಲಿ ಆಗುವಂತ ಅನ್ಯಾಯದ ಬಗ್ಗೆ ಪ್ರತಿಕೆಗಳಲ್ಲಿ ವರದಿ ಮಾಡಿ ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೆನೆ.
ಆದರೆ, ಸಿರಗುಪ್ಪ ಪೊಲೀಸ್ ಠಾಣೆಯಿಂದ ನನ್ನ ಮೇಲೆ ವಿನಾ ಕಾರಣ ರೌಡಿ ಸಿಟ್ ಓಪನ್ ಮಾಡುತ್ತೇವೆ ಎಂದು ನೋಟಿಸ್ ನೀಡುತ್ತಿದ್ದಾರೆ.
ಇದರಲ್ಲಿ ಇಲ್ಲಿನ ಕೆಲ ಪತ್ರಕರ್ತರು ನಮ್ಮ ಮೇಲೆ ಇಲ್ಲದ ಆರೋಪಗಳನ್ನು ಹೋರಿಸಿ ನಮ್ಮ ಮೇಲೆ ಪ್ರಕರಣದ ಭಯ ಹುಟ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರಿಗೆ ಕುಲಂಕುಶವಾಗಿ ಪರಿಶೀಲಿಸುವಂತೆ ಮನವಿ ಮಾಡಲಾಗಿತ್ತು.
ಆದರೂ ಸಹ ಕಳೆದ ಮೂರು ದಿನಗಳ ಹಿಂದೆ ನೋಟಿಸ್ ನೀಡಿದ್ದಾರೆ. ಸಮಾಜದಲ್ಲಿ ಆಗುವಂತ ಭ್ರಷ್ಠಾಚಾರದ ಬಗ್ಗೆ ವರದಿ ಮಾಡಿ ಜನರಿಗೆ ತೋರಿಸಿದರೆ ನಮ್ಮ ಮೇಲೆ ಪ್ರಕರಣ ದಾಖಲು ಮಾಡುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿರಿಗಳು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.




