Ad imageAd image

ಕೊನೆಗೂ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡ ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರ ನಮ್ಮ ಭೂಭಾಗವಲ್ಲ

Bharath Vaibhav
ಕೊನೆಗೂ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡ ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರ ನಮ್ಮ ಭೂಭಾಗವಲ್ಲ
WhatsApp Group Join Now
Telegram Group Join Now

ಸ್ಲಾಮಾಬಾದ್: ಕಾಶ್ಮೀರಿ ಕವಿ ಅಹ್ಮದ್ ಫರ್ಹಾದ್ ಪತ್ತೆಗೆ ಸಂಬಂಧಿಸಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ (ಮೇ 31) ತಿರಸ್ಕರಿಸಿದೆ ಮತ್ತು ಮೊದಲು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಅಹ್ಮದ್ ಫರ್ಹಾದ್ ಮೇ 14 ರಂದು ರಾವಲ್ಪಿಂಡಿಯಿಂದ ನಾಪತ್ತೆಯಾಗಿದ್ದು, ಒಂದು ದಿನದ ನಂತರ ಅವರ ಪತ್ನಿ ಉರುಜ್ ಜೈನಾಬ್ ಅವರನ್ನು ಹುಡುಕುವಂತೆ ಇಸ್ಲಾಮಾಬಾದ್ ಹೈಕೋರ್ಟ್ (IHC) ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ಪಿಒಕೆ ನಮ್ಮದಲ್ಲ ವಿದೇಶಿ ಪ್ರದೇಶ’

ಈ ಪ್ರಕರಣದಲ್ಲಿ, ಫೆಡರಲ್ ಪ್ರಾಸಿಕ್ಯೂಟರ್ ಜನರಲ್ (ಸರ್ಕಾರಿ ವಕೀಲರು) ಇಸ್ಲಾಮಾಬಾದ್‌ನಿಂದ ಅಪಹರಣಕ್ಕೊಳಗಾದ ಕವಿ ಅಹ್ಮದ್ ಫರ್ಹಾದ್ ಬಗ್ಗೆ ಸರ್ಕಾರದ ಪರ ವಾದಿಸುತ್ತಿದ್ದರು. ಈ ವೇಳೆ ನ್ಯಾಯಾಲಯದಲ್ಲಿ ಅವರು, ‘ಪಾಕ್ ಆಕ್ರಮಿತ ಕಾಶ್ಮೀರ (POK) ನಮ್ಮದಲ್ಲ, ವಿದೇಶಿ ಪ್ರದೇಶವಾದ ಕಾರಣ ಅಹ್ಮದ್ ಫರ್ಹಾದ್ ನನ್ನು ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದಾದ ಬಳಿಕ ಹೈಕೋರ್ಟ್ ಕೂಡ ಸರಕಾರಿ ವಕೀಲರ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿ ಪಿಒಕೆ ವಿದೇಶಿ ಪ್ರದೇಶ ಎಂದಾದರೆ ಪಾಕಿಸ್ತಾನಿ ರೇಂಜರ್‌ಗಳು ಅಲ್ಲಿಗೆ ಹೇಗೆ ಪ್ರವೇಶಿಸಿದರು? ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ಬಲವಂತವಾಗಿ ಜನರ ಅಪಹರಣ ಮಾಡುತ್ತಿರುವುದು ನ್ಯಾಯೋಚಿತವಲ್ಲ ಎಂದು ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಸರ್ಕಾರಿ ವಕೀಲರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನಿ ಪತ್ರಕರ್ತರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸರ್ಕಾರಿ ವಕೀಲರ ಈ ಹೇಳಿಕೆಯು ಆಜಾದ್ ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಸ್ವತಂತ್ರ ಕಾಶ್ಮೀರ ನಮ್ಮದಲ್ಲದಿದ್ದರೆ ಪಾಕಿಸ್ತಾನದ ಸೈನಿಕರನ್ನು ವಿದೇಶಿ ಪ್ರದೇಶದಲ್ಲಿ ಹೇಗೆ ನಿಯೋಜಿಸಲಾಯಿತು ಎಂದು ಪ್ರಶ್ನಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!