————————————————————ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಯಿತು
ಅಹ್ಮದಾಬಾದ್: ಈಡೀ ಕರ್ನಾಟಕ ರಾಜ್ಯಾದ್ಯಂತ ಸಂಭ್ರಮ ಈಗ ಮನೆ ಮಾಡಿದೆ. ಕಾರಣ ಏನೂ ಗೊತ್ತಾ? ಹೌದು ನಿಮ್ಮ ಉಹೆ ಸರಿ. ಸುಮಾರು ವರ್ಷಗಳಿಂದ ಕಪ್ ನಮ್ಮದೇ ಕಪ್ ನಮ್ಮದೇ ಎಂದು ಕನವರಿಸುತ್ತಿದ್ದ ಕೋಟ್ಯಂತರ ಕನ್ನಡ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮ ಮನೆ ಮಾಡಿದ ದಿನ.

ಎಸ್ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಕಪ್ ಎತ್ತಿ ಹಿಡಿಯಿತು. ಇತ್ತ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿತು. ನಗರ, ಹಳ್ಳಿಗಳೆಂಬ ಬೇಧ ವಿಲ್ಲದೇ ಬೀದಿ ಬೀದಿಗಳಲ್ಲಿ, ಗಲ್ಲಿಗಳಲ್ಲಿ, ಓಣಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಕಳೆದ ರಾತ್ರಿ 1 ಗಂಟೆ ಆಗುವವರೆಗೂ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದರು. ನಿದ್ರೆಯಲ್ಲೂ ಆರ್ ಸಿಬಿ, ಆರ್ ಸಿಬಿ ಎಂದರು.

ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೈನಲ್ ಪಂದ್ಯಕ್ಕೆ ಮುನ್ನವೇ ಶುಭ ಹಾರೈಸಿದ್ದರು. ಫೈನಲ್ ಗೆ ಎರಡೂ ದಿನ ಮುನ್ನವೇ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ, ಹವನ ಪೂಜೆ ಸಲ್ಲಿಸಿದ್ದರು. ಆ ದೇವರು ಕೊನೆಗೂ ಎಸ್ ಎಂದ. ಆರ್ ಸಿಬಿ ಕಪ್ ಗೆದ್ದಿತು. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ದೇವರಿಗೆ ಮೋರೆ ಹೋದದ್ದು ಈಡೇರಿತು. ಒಟ್ಟಿನಲ್ಲಿ ತುಂಬಾ ಖುಷಿ ಆಯಿತು.
ಇಂದು ಸ್ಕೋರ್ ವಿವರ ಬೇಡ. ಸ್ಕೋರ್ ವಿವರ ನಿಮಗೆಲ್ಲ ಗೊತ್ತು. ಸಂತಸ ಸಂಭ್ರಮವನ್ನಷ್ಟೇ ಬರೆಯುತ್ತಿದ್ದೇನೆ
-ಬಿವಿ-5 ನ್ಯೂಜ್ ಸ್ಪೋಟ್ಸ್ ಡೆಸ್ಕ್




