Ad imageAd image

ಕೊನೆಗೂ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ 

Bharath Vaibhav
ಕೊನೆಗೂ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ 
WhatsApp Group Join Now
Telegram Group Join Now

ಬೆಂಗಳೂರು: ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ಕೊನೆಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ತೀವ್ರ ವಿರೋಧದ ನಡುವೆಯೂ ದಲಿತರ ಒಳ ಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಇಂದು ದಲಿತ ಸಮುದಾಯದ ಸಚಿವರಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲಾಗಿತ್ತು.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತಂದರು. ಮೀಸಲಾತಿ ಪೆಂಡಿಂಗ್ ನಿಂದ ನೇಮಕಾತಿ ವಿಳಂಬದ ಬಗ್ಗೆಯೂ ಪ್ರಸ್ತಾಪಿಸಿದ್ರು.

ರಾಜ್ಯಪಾಲರಿಗೆ ದಲಿತ ಸಮುದಾಯದ ಸಚಿವರ ನಿಯೋಗವು ಸಂಪೂರ್ಣ ವಿವರಣೆಯನ್ನು ನೀಡಿತು. ಮುಂಬಡ್ತಿ, ನೇಮಕಾತಿಯಲ್ಲಿ ಇರುವ ಗೊಂದಲಗಳ ಬಗ್ಗೆಯೂ ವಿವರಣೆ ನೀಡಲಾಯಿತು.

ಹೀಗಾಗಿ ಮತ್ತೊಮ್ಮೆ ಪರಿಶೀಲಿಸಿ ಕೆಲವು ಗೊಂದಲಗಳ ನಡುವೆಯೂ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ಸಹಿ ಹಾಕಿ, ಅಂಗೀಕಾರದ ಮುದ್ರೆಯನ್ನು ಒತ್ತಿದ್ದಾರೆ.

ಮುಂದೇನು?

ರಾಜ್ಯಪಾಲರ ಅಂಗೀಕಾರದ ನಂತರ ಸರ್ಕಾರವು ಈಗ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕಿದೆ. ಇದರ ಬೆನ್ನಲ್ಲೇ ಒಳ ಮೀಸಲಾತಿ ಹಂಚಿಕೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಅಂಕಿಅಂಶಗಳ ಕ್ರೋಢೀಕರಣ ಮತ್ತು ಸಮಿತಿಗಳ ರಚನೆಗೆ ಸರ್ಕಾರ ಮುಂದಾಗುವ ಸಾಧ್ಯತೆಯಿದೆ.

ಈ ಬೆಳವಣಿಗೆಯು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ದಲಿತ ಸಂಘಟನೆಗಳು ಮತ್ತು ಹಿರಿಯ ಹೋರಾಟಗಾರರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!