ಚಾಮರಾಜನಗರ: ತಾಲ್ಲೂಕಿನ ಸಂತೆಮರಳ್ಳಿ ಗ್ರಾಮದಲ್ಲಿ ರಾಜೇಶ್ ಎಂಬುವವರು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನವರಿಂದ ಮನೆ ಸಾಲ ಪಡೆದಿರುತ್ತಾರೆ.ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿಲ್ಲ ಎಂದು ಫೈನಾನ್ಸ್ ನವರು ಮನೆಯನ್ನು ಸೀಜ್ ಮಾಡಿರುತ್ತಾರೆ. ಆಗಾಗಿ ಎಂ. ರಾಜೇಶ್ ಹಾಗೂ ಅವರ ಪತ್ನಿ ಶ್ವೇತ ಮತ್ತು ಮಕ್ಕಳು ಬೀದಿಯಲ್ಲಿ ವಾಸ ಮಾಡುತ್ತಿದ್ದಾರೆ…
76ನೇ ಗಣರಾಜ್ಯೋತ್ಸವ ದಿನನೇ ಕುಟುಂಬದವರು ಮಾಧ್ಯಮದ ಮೂಲಕ ನೋವನ್ನು ಹೇಳಿಕೊಂಡು ಕಣ್ಣೀರಿಟ್ಟಿರುವ ಘಟನೆ ಕೊಳ್ಳೇಗಾಲ ವಿಧಾನ ಸಭೆ ಕ್ಷೆತ್ರದ ಸಂತೆಮರಳ್ಳಿ ಗ್ರಾಮದಲ್ಲಿ ನಡೆದಿದೆ….

ಕುಟುಂಬದವರು ಮಾತನಾಡಿ ಫೈನಾನ್ಸ್ ನವರ ಹತ್ತಿರ ರೈತ ಮುಖಂಡರನ್ನು ಕರೆದುಕೊಂಡು ಹೋಗಿ ಸ್ವಲ್ಪ ಹಣ ಪಾವತಿ ಮಾಡುವುದಾಗಿ ಹೇಳಿದರು ಸಹ ನಮಗೆ ಪೂರ್ಣ ಹಣ ಕಟ್ಟಬೇಕು ಎಂದು ನಮ್ಮ ಮನೆಯನ್ನು ಮುಟ್ಟುಗೊಲು ಮಾಡಿಕೊಂಡಿದ್ದಾರೆ.
ನಮಗೆ ಜೀವನ ನೆಡಿಸಲು ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿದೆ,ನಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದು ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ.ಮನೆಯ ಹೊರಗಡೆ ಇರುವ ಶೌಚಾಲಯ ಹಾಗೂ ಸ್ನಾನದ ಮನೆಯನ್ನು ಬೀಗ ಹಾಕಿದ್ದು, ನಮಗೆ ದೈನಂದಿನ ಚುಟುವಟಿಕೆಗೂ ಸಹ ಪರಿತಪಿಸುವಂತಾಗಿದೆ.
ನಮಗೆ ನ್ಯಾಯ ಕೊಡಿಸಿ ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬಸ್ಥರು ಧರಣಿ ಮಾಡಬೇಕಾಗುತ್ತದೆ ಎಂದು ಮಾಧ್ಯಮದ ಮನವಿ ಮಾಡಿದರು….
ಗ್ರಾಮಸ್ಥರಾದ ಕಿಟ್ಟಪ್ಪ ರವರು ಮಾತನಾಡಿ ದಿನದಿಂದ ದಿನಕ್ಕೆ ಫೈನಾನ್ಸ್ ನವರ ಹಾವಳಿ ಹೆಚ್ಚಾಗುತ್ತಿದೆ. ದಯಮಾಡಿ ನೊಂದ ಕುಟುಂಬಗಳನ್ನು ಉಳಿಸಿ ಎಂದು ತಿಳಿಸಿದರು.
ವರದಿ :ಸ್ವಾಮಿ ಬಳೇಪೇಟೆ




