ರಾಮದುರ್ಗ : ಪುರಸಭೆಯಲ್ಲಿ ಕೆನರಾ ಬ್ಯಾಂಕ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಹಯೋಗದಲ್ಲಿ ಬೀದಿಬದಿ ವ್ಯಾಪಾರಸ್ಥರಿಗಾಗಿ ಆರ್ಥಿಕ ಸಾಕ್ಷರತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಮುಖ್ಯ ಅತಿಥಿಯಾಗಿ ಮಾತನಾಡಿದ ಕೆನರಾ ಬ್ಯಾಂಕ್ ಸಿನಿಯರ್ ಮ್ಯಾನೇಜರ ಅಜಿತ್ ರಾಜನ್ನರವರು
ಭಾರತ ಸರಕಾರ ಪಿ.ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ಸಬಲೀಕರಣಕ್ಕಾಗಿ ಬ್ಯಾಂಕುಗಳ ಮೂಲಕ ಸಾಲಸೌಲಭ್ಯಗಳಿದ್ದು, ಸಾಲ ಯೋಜನೆ ಸದುಪಯೋಗ ಪಡೆಸಿಕೊಳ್ಳಬೇಕೆಂದು ವ್ಯಾಪಾರಸ್ತರಿಗೆ ಮನವಿಮಾಡಿಕೊಂಡರು
ಪಿ.ಎಂ ಸ್ವನಿಧಿ ಯೋಜನೆ 2018 ರಿಂದ ಪ್ರಾರಂಭವಾದಾಗ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ ನೀಡಲಾಗಿತ್ತು.ಆದರೆ ಈಗ ಸಾಲದ ಪ್ರಮಾಣವನ್ನು 15 ಸಾವಿರಕ್ಕೆ ಹೆಚ್ಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ 2ನೇ ಹಂತದಲ್ಲಿ 25 ಸಾವಿರ ಹಾಗೂ 3 ಹಂತದಲ್ಲಿ 50 ಸಾವಿರ ರೂ. ಸಾಲ ದೊರೆಯಲಿದೆ. ತಂತ್ರಜ್ಣಾನದ ಮೂಲಕ ನಗದು ರಹಿತವಾಗಿ ಸಾಲ ಮರುಪಾವತಿ ಮಾಡಿದರೆ ಕ್ಯಾಶ ಬ್ಯಾಕ್ ಲಭಿಸಲಿದೆ ಎಂದು ತಿಳಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನ ಗೊಂದಿ ಮಾತನಾಡಿ, ಸಾಮಾಜಿಕ ಸುರಕ್ಷಾ ವಿಮಾ ಯೋಜನೆಗಳು, ಸೈಬರ್ ಸೆಕ್ಯುರಿಟಿ, ಕ್ಯಾನ್ಸರ್ ಕೇರ್ ಎಂಜಿಲ್ ಖಾತೆ ಹಾಗೂ ಪೊಂಜಿ ಸ್ಕೀಮ್ ಬಗ್ಗೆ ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಕೆನರಾ ಬ್ಯಾಂಕಿನಿಂದ ಸ್ತ್ರೀಶಕ್ತಿ ಸಂಘಗಳಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಕೆನರಾ ಬ್ಯಾಂಕ ಮ್ಯಾನೇಜರ್ ಅಜಿತ ರಾಜನ್ನವರ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಪುರಸಭೆಯ ಡೇನಲ್ಮ್ ಸಮುದಾಯ ಸಂಘಟನಾಧಿಕಾರಿ ಗೀತಾ ಬೆಳಗಲಿ, ಪುರಸಭೆ ಸದಸ್ಯರು ಹಾಗೂ ಬೀದಿಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ




