———————ಶ್ರೀರಾಮ್ ಲೈಫ್ ಇನ್ಶೂರೆನ್ಸ್
——————– ಶ್ರೀರಾಮ್ ಲೈಫ್ ಇನ್ಶುರೆನ್ಸ್ ಸೇಡಂ ಶಾಖೆ ವ್ಯವಸ್ಥಾಪಕರು ಸುರೇಶ
ಸೇಡಂ: ತಾಲೂಕಿನ ಮಾರಪಲ್ಲಿ ಗ್ರಾಮದಲ್ಲಿ ಶ್ರೀರಾಮ್ ಲೈಫ್ ಇನ್ಶುರೆನ್ಸ್ ಪಾಲಿಸಿದಾರರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದು ಶ್ರೀರಾಮ್ ಲೈಫ್ ಇನ್ಶುರೆನ್ಸ್ ಸೇಡಂ ಶಾಖೆ ವ್ಯವಸ್ಥಾಪಕ ಸುರೇಶ ಹೇಳಿದ್ದಾರೆ. ಶ್ರೀರಾಮ್ ಲೈಫ್ ಇನ್ಶುರೆನ್ಸ್‌ನ ಸೇಡಂ ಶಾಖೆಯಲ್ಲಿ ಜೀವ ವಿಮಾ ಪಾಲಿಸಿ ತೆಗೆದುಕೊಂಡಿದ್ದ ಮಾರಪಲ್ಲಿ ಗ್ರಾಮದ ಭೀಮ್ಷಾ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಮೃತ ಭೀಮ್ಷಾ ಶ್ರೀರಾಮ್ ಲೈಫ್ ಇನ್ಶುರೆನ್ಸ್ ಕಂಪನಿಯಲ್ಲಿ 32710 ರೂ. ಪಾಲಿಸಿಯನ್ನು ತೆಗೆದುಕೊಂಡು ಪ್ರೀಮಿಯಂ ಪಾವತಿಸಿದ್ದರು. ಪಾಲಿಸಿದಾರರ ಮರಣದ ನಂತರ, ಶ್ರೀರಾಮ್ ಲೈಫ್ ಇನ್ಶುರೆನ್ಸ್ ಕಂಪನಿಯು 6 ಲಕ್ಷ, 35 ಸಾವಿರ ರೂ, ಮೌಲ್ಯದ ವಿಮಾ ಚೆಕ್ ಅನ್ನು ಹಸ್ತಾಂತರಿಸಿದರು.
ಶ್ರೀರಾಮ್ ಜೀವ ವಿಮಾ ಸಂಸ್ಥೆಯ ಸೇಡಂ ಶಾಖೆಯ ಸಿಬ್ಬಂದಿಯಾದ ಯೂನಿಟ್ ವ್ಯವಸ್ಥಾಪಕರು ಜಗದೀಶ ಬಡಿಗೇರ್, ಬಿಡಿಇ ಶ್ರೀನಿವಾಸ್ ಕುಂಬಾರ, ಡೆವಲಪ್ಮೆಂಟ್ ಆಫೀಸರಗಳಾದ ವೆಂಕಟ್ ರಾವ ಭೋಸ್ಲೆ, ಶ್ರೀನಿವಾಸ ಸೂರ್ಯವಂಶಿ, ರಮೇಶ್ ಚೆವಾಣ್, ಶಾಮರೆಡ್ಡಿ , ರಾಜು ರ
ರಿಬ್ಬನಪಲ್ಲಿ ಮತ್ತು ಸೇಲ್ಸ್ ಆಫೀಸರಗಳಾದ ಶ್ರೀನಿವಾಸ್ ಹೂಗಾರ, ವೆಂಕಟಪ್ಪ ಮೋದನ್, ನಿರಂಜನ್ ಬೊಂಬಾಯಿ, ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ತಡಕಲ್, ರುದ್ರಶೇಟ್, ಆನಂದ ಶೆಂಕರ್, ನಾಗಪ್ಪ, ಗುಂಡಪ್ಪ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




