ರವಿವಾರ ಸಂಜೆ ಹುಬ್ಬಳ್ಳಿಯ ಎಪಿಎಂಸಿ ರಸ್ತೆ ಅಪೋಸಿಟ್ ಪುಟ್ ಪಾತ್ ಸ್ಥಳದಲ್ಲಿ ಶರಾಬಿ ಸ್ಪಾಟ್ ಹಾಗೂ ಡೈಲಿ ಡೋಸ್ ಬಾರಗಳ ಮುಂದೆ ದಿನನಿತ್ಯ ಇದೇ ರೀತಿ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದ ಜನರಿಗೆ ಟ್ರಾಫಿಕ್ ಪೊಲೀಸರಿಂದ ಜಾಗೃತಿ ಹಾಗೂ ದಂಡದ ಪ್ರಯೋಗದ ಮೂಲಕ ಬಿಸಿ ಮುಟ್ಟಿಸಲಾಯಿತು. ಹುಬ್ಬಳ್ಳಿಯ ದಕ್ಷಿಣ ಸಂಚಾರ ಪೊಲೀಸ್ ಠಾಣೆ
ಎ ಎಸ ಐ ಹಾಗೂ ಸಿಬ್ಬಂದಿಯಿಂದ ಅವರಿಂದ ಮೈಕಿನಲ್ಲಿ ವಾಹನಗಳನ್ನು ತೆಗೆಯಿರಿ ಎಂದು ಹೇಳಿದರು ತೆಗೆಯದ ವಾಹನಗಳಿಗೆ ಲಾಕ್ ಮಾಡುವ ಮುಖಾಂತರ ಬಿಸಿ ಮುಟ್ಟಿಸಲಾಯಿತು ಇದೇ ರೀತಿ ಅಡ್ಡಾಡಿದ್ದಿ ನಿಲ್ಲಿಸುವ ವಾಹನಗಳ ಸವಾರರಿಗೆ ಪೊಲೀಸ್ ಇಲಾಖೆ ಕೆಲಸ ನಿರಂತರವಾಗಿ ಸಾಗಲಿ ಪ್ರಜ್ಞಾವಂತ ಜನರಿಂದ ಬಂದ ಅಭಿಪ್ರಾಯವಾಗಿತ್ತು ಇದೇ ರೀತಿ ನೋ ಪಾರ್ಕಿಂಗ್ ಬೋರ್ಡನ್ನು ಪ್ರಮುಖ ಸ್ಥಳಗಳಲ್ಲಿ ಹಾಕಬೇಕೆಂದು ನಾಗರಿಕರ ಒತ್ತಾಯವು ಆಗಿತ್ತು ಹುಬ್ಬಳ್ಳಿಯ ಸುಂದರ ನಗರಕ್ಕೆ ಕೆಲಸ ಮಾಡುವಂತಹ ಪ್ರತಿಯೊಬ್ಬರು ಇಂಥ ಪೋಲಿಸರ ಕಾರ್ಯಕ್ಕೆ ಬೆಂಬಲ ನೀಡಬೇಕಾಗಿದೆ ನಮ್ಮ ಬಿ ವಿ 5 ಸುದ್ದಿವಾಹಿನಿಂದ ಪ್ರಮುಖ ಸ್ಥಳಗಳಲ್ಲಿ ಈ ರೀತಿ ವಾಹನಗಳನ್ನು ನೋ ಪಾರ್ಕಿಂಗ್ ಮಾಡುವ ಸ್ಥಳಗಳನ್ನು ನಿರಂತರವಾಗಿ ಸುದ್ದಿ ಮಾಡಲಿದೆ.

ವರದಿ: ಗುರುರಾಜ ಹಂಚಾಟೆ
ಹುಬ್ಬಳ್ಳಿಯಲ್ಲಿ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡದ ಬಿಸಿ




