ಇರಾನ್ ಕಥೆ ಮುಗಿದಿದೆ. ಇರಾನ್ ಬಳಿ ಈಗ ಏನೂ ಉಳಿದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಅವರು ಇರಾನ್ ವಿರುದ್ಧದ ಸೇನಾ ಕರ‍್ಯಾಚರಣೆಗೆ ಬೆಂಬಲ ಸೂಚಿಸದ ರಾಷ್ಟçಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡೋನಾಲ್ಡ್ ಟ್ರಂಫ್ ಇರಾನ್ ವಿರುದ್ಧದ ದಾಳಿಗೆ ಬೆಂಬಲ ಸೂಚಿಸದ ರಾಷ್ಟçಗಳ ಕೂಟದ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
‘ಟ್ರೂತ್ ಸೋಸಿಯಲ್’ಗೆ ಪೋಸ್ಟ್ ಹಂಚಿಕೊAಡಿರುವ ಕೆಲ ರಾಷ್ಟçಗಳ ಅಸಹಕಾರಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಅವರು ಇರಾನ್ ಬಳಿ ಈಗ ಏನೂ ಉಳಿದಿಲ್ಲ. ಎಲ್ಲವೂ ಮುಗಿದಿದೆ ಎಂದು ಹೇಳಿಕೆ ನೀಡಿದ್ದಾರೆ.
‘ಫಿನಿಶ್ ಆಫ್, ವಾಟ್ಸ್ ಲೆಫ್ಟ್ ಇನ್ ಇರಾನ್’: ಡೋನಾಲ್ಡ್ ಟ್ರಂಫ್




