ಬೆಂಗಳೂರು : ಮಹಿಳೆ ಒಬ್ಬರಿಗೆ ಧನಸಹಾಯ ಮಾಡುವ ನೆಪದಲ್ಲಿ ಸ್ವಾಮೀಜಿ ಒಬ್ಬರು ಮಂಚಕ್ಕೆ ಕರೆದಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದು ಮೆಳೆಕೋಟೆಯ ಬ್ರಹ್ಮಾನಂದ ಗುರುಜಿ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮೆಳೆಕೋಟೆಯ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಸ್ವಾಮೀಜಿ ವಿರುದ್ಧ ಈ ಆರೋಪ ಕೇಳಿಬಂದಿದೆ.
ಸೈಟ್ ತೆಗೆದುಕೊಳ್ಳಲು ಬಡ ಮಹಿಳೆ ಧನಸಹಾಯ ಕೇಳಿದರು. ಹಣ ಕೇಳಿದಕ್ಕೆ ರೂಮ್ಗೆ ಬರುವಂತೆ ಸ್ವಾಮೀಜಿ ಕರೆದಿರುವ ಆರೋಪ ಕೇಳಿಬಂದಿದೆ ನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಿಯೋ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಬಳಿ 12 ಲಕ್ಷ ಹಣವಿಲ್ಲ 8 ಲಕ್ಷ ಮಾತ್ರ ಇದೆ ಅಂತ ದಂಪತಿಗಳು ಹೇಳಿದ್ದರು. 5 ಲಕ್ಷ ನಾನು ಸಹಾಯ ಮಾಡುತ್ತೇನೆ ಅಂತ ಸ್ವಾಮೀಜಿಗಳು ಹೇಳಿದ್ದಾರೆ.
ಮಹಿಳೆಯಿಂದ 5 ಲಕ್ಷ ಅಡ್ವಾನ್ಸ್ ಬೇರೊಬ್ಬರಿಗೆ ಕೊಡಿಸಿದ್ದರು . ಹಣ ನೀಡಿ ವರ್ಷ ಕಳೆದರೂ ಕೂಡ ಸೈಟ್ ಕೊಡದೆ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ ಹಣ ಬೇಕೆಂದರೆ ಮಂಚಕ್ಕೆ ಬಾ ಅಂತ ಸ್ವಾಮೀಜಿ ಕರೆದಿದ್ದಾರೆ ಎಂದು ಮಹಿಳೆಯ ಆರೋಪಿಸಿದ್ದಾರೆ ಹಾಗಾಗಿ ನೊಂದ ಮಹಿಳೆ ಇದೀಗ ನ್ಯಾಯಕ್ಕಾಗಿ ಅಂಗಲಾಚುತಿದ್ದಾರೆ.
ಬ್ರಹ್ಮನಂದ ಗುರೂಜಿ ಮನೆಯ ಮುಂದೆ ಬಡ ದಂಪತಿಗಳು ವಾಸವಿದ್ದರು. ಕಡಿಮೆ ಬೆಲೆಗೆ ಸೈಟ್ ಕೊಡಿಸುತ್ತಾರೆ ಎಂದು ಸ್ವಾಮೀಜಿಯ ಪರಿಚಯ ಆಗಿತ್ತು. 13 ಲಕ್ಷ ಸೈಟ್ ಅನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಮಾತುಕತೆ ಆಗಿತ್ತು.
ಆದರೆ ನಮ್ಮ ಬಳಿ 13 ಲಕ್ಷ ಹಣವಿಲ್ಲ ಹಣವಿಲ್ಲ 8 ಲಕ್ಷ ಮಾತ್ರ ನಮ್ಮ ಬಳಿ ಇದೆ ಅಂತ ಬಡ ದಂಪತಿಗಳು ಹೇಳಿದರು. ಆಗ ಸ್ವಾಮೀಜಿ ಐದು ಲಕ್ಷ ನಾನು ಸಹಾಯ ಮಾಡುತ್ತೇನೆ ಅಂತ ಹೇಳಿದ್ದಾರೆ.
ಹಣ ನೀಡಿ ವರ್ಷ ಕಳೆದರೂ ಕೂಡ ಸೈಟ್ ಕೊಡದೆ ನಿರ್ಲಕ್ಷ ವಹಿಸಿದ್ದಾರೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ರೂಮಿಗೆ ಕರೆದಿದ್ದಾರೆ ಮಂಚಕ್ಕೆ ಬಾ ಅಂತ ಸ್ವಾಮೀಜಿ ಕರೆದಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಸೈಟು ವಿಚಾರವಾಗಿ 2 ವರ್ಷದ ಹಿಂದೆ ಮಹಿಳೆ ಬಂದಿದ್ದರು ನಾನು ಸೈಟ್ ವ್ಯಾಪಾರ ಮಾಡಲ್ಲ ಅಂದ್ರು ನನ್ನ ಬಳಿ ಕೇಳಿಕೊಂಡಿದ್ದರು ಒಬ್ಬರ ಬಳಿ ಸೈಟ್ ಮಾತನಾಡಿ 5 ಲಕ್ಷ ಹಣ ಅಡ್ವಾನ್ಸ್ ಕೊಡಬೇಕು ಇ ಖಾತೆಗಳು ನಿಲ್ಲಿಸಿದ್ದ ಕಾರಣ ಸೈಟ್ ನೋಂದಣಿ ಆಗುತ್ತಿಲ್ಲ.
ನೋಂದಣಿ ಆಗದ್ದಕ್ಕೆ ಮಹಿಳೆಗೆ ಹಣ ವಾಪಸ್ ಕೊಡಿಸಿದ್ದೆ ಮಹಿಳೆಯ ಜೊತೆ ಸೇರಿ ನನ್ನ ವಿರುದ್ಧ ಷಡ್ಯಂತರ ಮಾಡುತ್ತಿದ್ದಾರೆ. ಷಡ್ಯಂತ್ರ ನಡೆಸಿದ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ ಎಂದು ಮಹಿಳೆಯ ಆರೋಪದ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.




