Ad imageAd image

ಚಿತ್ರೀಕರಣ ವೇಳೆ 30 ಅಡಿ ಎತ್ತರದಿಂದ ಬಿದ್ದು ಲೈಟ್ ಬಾಯ್ ಸಾವು : ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ 

Bharath Vaibhav
ಚಿತ್ರೀಕರಣ ವೇಳೆ 30 ಅಡಿ ಎತ್ತರದಿಂದ ಬಿದ್ದು ಲೈಟ್ ಬಾಯ್ ಸಾವು : ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ 
WhatsApp Group Join Now
Telegram Group Join Now

ಬೆಂಗಳೂರು: ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ 30 ಅಡಿ ಎತ್ತರದ ಏಣಿಯಿಂದ ಬಿದ್ದು ಲೈಟ್ ಬಾಯ್ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆ ಕೊರಟಗೆರೆಯ ಶಿವರಾಜ್(30) ಮೃತಪಟ್ಟವರು ಎಂದು ಹೇಳಲಾಗಿದೆ.ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿ.ಆರ್.ಎಲ್. ಅರೇನಾ ಸಮೀಪ ‘ಮನದ ಕಡಲು’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆಯಲ್ಲಿ ಏಣಿಯಿಂದ ಬಿದ್ದು ಶಿವರಾಜ್ ಮೃತಪಟ್ಟಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಮತ್ತು ವ್ಯವಸ್ಥಾಪಕ ಸುರೇಶ್ ವಿರುದ್ಧ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!