Ad imageAd image

ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ:  F,I,R. ದಾಖಲು

Bharath Vaibhav
ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ:  F,I,R. ದಾಖಲು
WhatsApp Group Join Now
Telegram Group Join Now

———————-ಬಳಗಾನೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ತಮ್ಮನಿಂದ ಕೃತ್ಯ

ಮಸ್ಕಿ:  ತಾಲ್ಲೂಕಿನ ಬಳಗನೂರು ಪಟ್ಟಣ ಪಂಚಾಯತ್ ನಲ್ಲಿ ಫಾರಮ್ ನಂಬರ್ 3 ಕೇಳಲು ಪಟ್ಟಣ ಪಂಚಾಯ್ತಿಗೆ ಬಂದಿದ್ದ ಸಿಂಧನೂರಿನ ರಿಯಲ್ ಎಸ್ಟೇಟ್ ಉಧ್ಯಮಿ ಖಾಜಾಸಾಬ್ ಎನ್ನುವವರ ಮೇಲೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಮತ್ತವರ ಸಹೋದರನಿಂದ ಹಲ್ಲೆಯಾದ ಘಟನೆ ಬಳಗಾನೂರು ಪಟ್ಟಣದ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದಿದೆ.
ಗುರುವಾರ ಮದ್ಯಾಹ್ನ ಒಂದು ಗಂಟೆಯ ಸುಮಾರಿಗೆ ಬಳಗಾನೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಡಾವಣೆಯ ಫಾರಮ್ ನಂಬರ್ 3 ನ್ನು ಕೇಳಲು ಬಡಾವಣೆಯ ಮಾಲಕ ಖಾಜಾಸಾಬ್ ಮುಖ್ಯಾಧಿಕಾರಿ ಸತ್ಯನಾರಾಯಣ ಕುಲಕರ್ಣಿ ಹಾಗೂ ಕಿರಿಯ ಅಭಿಯಂತರೆ ಮೀನಾಕ್ಷಮ್ಮರ ಬಳಿ ಹೋಗಿ ಮಾತನಾಡುತ್ತಿರುವಾಗ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಶಿವಕುಮಾರ ನಾಯಕ ಹಾಗೂ ಅವರ ಸಹೋದರ ಮೂಕಪ್ಪ ಅವಾಚ್ಯಶಬ್ದಗಳಿಂದ ನಿಂದಿಸಿ ಏಕಾಏಕಿ ಮುಖಕ್ಕೆ ಬೆನ್ನಿಗೆ ಮುಷ್ಠಿಮಾಡಿ ಹೊಡೆದು ಹಲ್ಲೆಮಾಡಿದ್ದಾರೆಂದು ಖಾಜಾಸಾಬ್ ಬಳಗಾನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಆ ಫಾರಮ್ 3 ಕೊಡಲು ಐದು ಲಕ್ಷ ಲಂಚದ ಬೇಡಿಕೆಯನ್ನು ಅಧ್ಯಕ್ಷ ಶಿವಕುಮಾರ ನಾಯಕ ಗೆ ಬಡಾವಣೆಯ ಮಾಲಕರ ಮುಂದಿಟ್ಟಿದ್ದಾನೆ. ಐದು ಲಕ್ಷ ಹಣವನ್ನು ಮಾಲಕ ಕೊಟ್ಟಿದ್ದಾನೆ. ಫಾರಮ್ ಕೇಳಲು ಬಂದಾಗ ಇನ್ನೂ ಐದುಲಕ್ಷ ರೂಪಾಯಿ ಕೊಟ್ಟರೆ ಕೊಡುತ್ತೇವೆ ಇಲ್ಲವಾದರೆ ಇಲ್ಲವೆಂದು ಹೇಳಿದ್ದಾರೆ.ಆಗ ಮಾತಿನ ಚಕಮಕಿ ನಡೆದು ಅಧ್ಯಕ್ಷ ಮತ್ತವರ ಸಹೋದರ ನನ್ನ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ದೂರನ್ನು ದಾಖಲಿಸಿದ್ದಾರೆ.
ಆ ದೂರಿನನ್ವಯ ಠಾಣಾಧಿಕಾರಿ  ಎಫ್,ಐ,ಆರ್,ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆದರೆ ಎಫ್,ಐ,ಆರ್,ದಾಖಲಾಗಿ ಒಂದು ದಿನ ಕಳೆದಿದ್ದರೂ ಆರೋಪಿಯನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ.
ಇದು ಅನುಮಾನಕ್ಕೀಡುಮಾಡಿದೆ. ಬಳಗಾನೂರು ಪಟ್ಟಣ ಪಂಚಾಯ್ತಿಯ ಲಂಚಾವತಾರ,ಅಧ್ಯಕ್ಷ ಮತ್ತವರ ತಮ್ಮನ ದೌರ್ಜನ್ಯ ದಬ್ಬಾಳಿಕೆ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ.
ಕಾಯುವ ದೇವರೇ ಕೊಲ್ಲಲು ನಿಂತಾಗ,ನೆರಳನ್ನು ನೀಡುವ ಮರವೇ ಮುರಿದು ಮೈಮೇಲೆ ಬಿದ್ದರೆ,ದಾಹತೀರಿಸುವ ನೀರೇ ವಿಷವಾದರೆ ಬದುಕಲು ಎಲ್ಲಿಗೆ ಓಡಬೇಕು? ರಕ್ಷಣೆ ಮಾಡಬೇಕಾದ ಆರಕ್ಷಕರು,ಉತ್ತಮ ಆಡಳಿತ ನೀಡಬೇಕಾದ ಅಧಿಕಾರಿ ಜನಪ್ರತಿನಿಧಿಗಳು ದಬ್ಬಾಳಿಕೆ ದೌರ್ಜನ್ಯ ನಡೆಸಿದರೆ ಅಮಾಯಕರು ಬದುಕುವುದಾದರೂ ಹೇಗೆ ಎಂದು ಹಲ್ಲೆಗೊಳಗಾದ ಖಾಜಾಸಾಬ್ ವ್ಯವಸ್ತೆಯನ್ನು ಪ್ರಶ್ನಿಸುತ್ತಿದ್ದಾರೆ.
ಕೂಡಲೆ ಆರಕ್ಷಕರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ಕಾನೂನಿನ ಕೈಗೊಪ್ಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ವರದಿ: ನಜೀರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!