ಇಲಕಲ್: ಇಲ್ಲಿನ ಕೌದಿ ಚೆನ್ನಪ್ಪ ಅವರ ತೋಟದಲ್ಲಿ ಲ್ಯಾಬ್ ತಳಿಯ ರಾಖಿ ನಾಯಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿತ್ತು ಜೀವ ರಕ್ಷಣೆಗಾಗಿ ಕೂಗ್ತಾ ಇತ್ತು ತಕ್ಷಣವೇ ಗಮನಿಸಿದ ರೈತ ಬಸನಗೌಡ ಪಾಟೀಲ್ ಅಗ್ನಿಶಾಮಕ ಸೇವೆಗೆ ಫೋನ್ ಮಾಡಿ ವಿಷಯ ತಿಳಿಸಿದ ಕೂಡಲೇ ಐದೇ ನಿಮಿಷದಲ್ಲಿ ತುರ್ತು ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಜೀವದ ಹಂಗು ತೊರೆದು ಬಾವಿಯಲ್ಲಿ ಇಳಿದು ನಾಯಿಯನ್ನು ಜೀವಂತವಾಗಿ ರಕ್ಷಣೆ ಮಾಡಿ ಎತ್ತಿಕೊಂಡು ಮೇಲೆ ಬಂದು ಜೀವಂತ ರಕ್ಷಣೆ ಮಾಡಿದ ನಾಯಿಯನ್ನು ಮಾಲಿಕರದ ಮಾಹಾಂತೇಶ ಕರ್ಜಗಿ ಅವರಿಗೆ ರಾಖಿ ಲ್ಯಾಬ್ ತಳಿಯ ನಾಯಿಯನ್ನು ಒಪ್ಪಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಸಂಗಪ್ಪ ಬಿ. ಪ್ರಕಾಶ್ ಚಿತ್ತರಗಿ. ಸಿಬ್ಬಂದಿಯವರಾದ ಮಾನಸಿಂಗ ಲಮಾಣಿ. ಪ್ರಭುದೇವ್ ಬೆಳ್ಳಿಹಾಳ. ಜಗದೀಶ್ ಗಿರಡ್ಡಿ. ಮಮ್ಮದರಫೀಕ್ ವಾಲಿಕಾರ್. ಅಶೋಕ ಕಾಮ. ಸಂತೋಷ್ ಕೆಲೂರು. ರವಿಚಂದ್ರ .ಇದ್ದರು ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿದ್ದ ಸಾರ್ವಜನಿಕರು ರೈತ ಬಸನಗೌಡ ಪಾಟೀಲ್ ಅವರ ಸಮಯ ಪ್ರಜ್ಞೆ ಹಾಗೂ ಅಗ್ನಿಶಾಮಕ ದಳದ ಸಾಹಸದ ಕೆಲಸಕ್ಕೆ ಕೃತಜ್ಞತೆ ಧನ್ಯವಾದಗಳು ತಿಳಿಸಿದರು.
ವರದಿ: ದಾವಲ್ ಶೇಡಂ




