ರಾಯಚೂರು: ತಾಲೂಕಿನ ಗಾರಲದಿನ್ನಿ ಗ್ರಾಮದ ತಾಯಮ್ಮ ಗುಡಿ ಹಿಂಭಾಗದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಬಣವೆಗಳು ಹೊತ್ತಿ ಉರಿದ ಘಟನೆ ಮಂಗಳವಾರ (ಎ.01) ನಡೆದಿದೆ.
ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಅಕ್ಕಪಕ್ಕದಲ್ಲೇ ಇದ್ದ ಐದಾರು ಬಣವೆಗಳು ಬೆಂಕಿಯ ಕೆನ್ನಾಲಿಗೆ ಸಿಲುಕಿ ಸುಟ್ಟು ಬೂದಿಯಾಗಿವೆ.
ಶಂಕರಗೌಡ, ಶಿವರಾಜಗೌಡ, ಪಂಪನಗೌಡ, ಮಹಾಬಲ್ ಸಾಬ್, ಅಜ್ಮೀರ್ ಸಾಬ್ ಎನ್ನುವವರ ಬಣವೆಗಳು ಸುಟ್ಟಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರೇ ಟ್ಯಾಂಕ್ ಮೂಲಕ, ಬಕೆಟ್, ಕೊಡಗಳ ಮೂಲಕ ನೀರು ಹಾಕಿ ಬೆಂಕಿ ನಂದಿಸಲು ನಾನಾ ಕಸರತ್ತು ನಡೆಸಿದರೂ ಪ್ರಯೋಜನವಾಗಿಲ್ಲ. ಸಮೀಪದಲ್ಲಿ ಅಗ್ನಿ ಶಾಮಕ ಠಾಣೆ ಇಲ್ಲದಿರುವ ಕಾರಣ ಬೆಂಕಿ ತಹಬದಿಗೆ ತರಲಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರೇ ಟ್ಯಾಂಕ್ ಮೂಲಕ, ಬಕೆಟ್, ಕೊಡಗಳ ಮೂಲಕ ನೀರು ಹಾಕಿ ಬೆಂಕಿ ನಂದಿಸಲು ನಾನಾ ಕಸರತ್ತು ನಡೆಸಿದರೂ ಪ್ರಯೋಜನವಾಗಿಲ್ಲ.ಘಟನ ಸ್ಥಳಕ್ಕೆ ಗ್ರಾಮಲೆಕ್ಕಾ ಧಿಕಾರಿ ಶಾಂತ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈ ಕೊಳ್ಳುವುದಗಿ ತಿಳಿಸಿದರು. ಇದಕ್ಕೆಲ್ಲ ಸಮೀಪದಲ್ಲಿ ಅಗ್ನಿ ಶಾಮಕ ಠಾಣೆ ಇಲ್ಲದಿರುವ ಕಾರಣ ಬೆಂಕಿ ಹತೋಟಿಗೆ ಬರಲಿಲ್ಲ ವೆಂದು ಗ್ರಾಮಸ್ಥರು ಮದ್ದ್ಯಾಮದ ಪ್ರತಿಕ್ರಿಸಿದರು.
ವರದಿ: ಗಾರಲದಿನ್ನಿ ವೀರನಗೌಡ




