Ad imageAd image

ಗಾಯ್ ಪಾರ್ ದಿ ಗ್ಯಾಂಗ್ ನ ಡಕಾಯಿತನ​ ಮೇಲೆ ಫೈರಿಂಗ್​…

Bharath Vaibhav
ಗಾಯ್ ಪಾರ್ ದಿ ಗ್ಯಾಂಗ್ ನ ಡಕಾಯಿತನ​ ಮೇಲೆ ಫೈರಿಂಗ್​…
WhatsApp Group Join Now
Telegram Group Join Now

ಹುಬ್ಬಳ್ಳಿ:-ಡಕಾಯಿತಿ ಗ್ಯಾಂಗ್​ ಸದಸ್ಯನ ಮೇಲೆ ಗೋಕುಲ ರೋಡ್ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಗೋಕುಲ್ ರೋಡ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲ್ ಗ್ರಾಮದ ಬಳಿ ನಡೆದಿದೆ.

ಮಹೇಶ್ ಸೀತಾರಾಮ್ ಕಾಳೆ ಎಂಬಾತನೇ ಪೊಲೀಸ್ ಗುಂಡು ತಿಂದು ಬಂಧಿತನಾಗಿರುವ ವ್ಯಕ್ತಿ. ಸೋಮವಾರ ನಸುಕಿನ ಜಾವ ಮಹೇಶ್ ಮತ್ತು ಈತನ ಗ್ಯಾಂಗ್‌ ಮನೆ ಕಳ್ಳತನಕ್ಕೆ ಇಳಿದಿತ್ತು. ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ಮಹೇಶ್​ ಕಾಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಉಳಿದವರು ಪರಾರಿಯಾಗಿದ್ದರು.

ಉಳಿದ ಡಕಾಯಿತರು ಇರುವ ಜಾಗ ತೋರಿಸುತ್ತೇನೆ ಅಂತ ಮಹೇಶ್ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾನೆ. ಡಕಾಯಿತರು ಇದ್ದ ಸ್ಥಳಕ್ಕೆ ಹೋದ ಬಳಿಕ ಮಹೇಶ್​ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ.ಪ್ರಾಣ ರಕ್ಷಣೆಗಾಗಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್​ಐ ಸಚಿನ ದಾಸರೆಡ್ಡಿ ಮಹೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಿಂದು ನೋವಿನಿಂದ ಒದ್ದಾಡುತ್ತಿದ್ದ ಮಹೇಶ್​ನನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್​​ಐ ಸಚಿನ್​ ಮತ್ತು ಪೇದೆ ವಸಂತ ಗುಡಿಗೇರಿಗೆ ಅವರಿಗೆ ಗಾಯವಾಗಿದೆ.

ನಗರದ ಕೆಎಂಆರ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಆರೋಗ್ಯ ವಿಚಾರಣೆ ಮಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ನಿನ್ನೆ ರಾತ್ರಿ 3 ಗಂಟೆ ಸುಮಾರಿಗೆ ಮನೆಗಳ್ಳತನಕ್ಕೆ ಐದಾರು ಜನರ ತಂಡ ಹೊಂಚು ಹಾಕಿತ್ತು. ಗೋಕುಲ ಗ್ರಾಮದ ಹೊರವಲಯದ ಹೊಸ ಲೆಹೌಟ್ ನಲ್ಲಿ ಕಟ್ಟಿರುವ ಹೊಸ ಮನೆಗೆ ಕಲ್ಲು ಹೊಡೆದಿದ್ದಾರೆ. ಆಗ ಗಾಜು ಹೊಡೆದ ಸದ್ದು ಕೇಳಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆಗ ಪೊಲೀಸರು ಸ್ಥಳಕ್ಕೆ ಹೋಗಿ ಕಾಯುತ್ತಿರುವಾಗ ಅನುಮಾನಸ್ಪದವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ಮಹೇಶ ಕಾಳೆ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಮಹೇಶ ಕಾಳೆ ಮೇಲೆ ಮಹಾರಾಷ್ಟ್ರದ ಜೌರಂಗಬಾದ್ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ 26 ಕ್ಕೂ ಹೆಚ್ಚು ದರೋಡೆ ‌ಪ್ರಕರಣಗಳು ಈತನ ಮೇಲಿವೆ. ಹೆಚ್ಚಿನ ಪ್ರಮಾಣದ ಡಕಾಯಿತಿ‌ ಕೃತ್ಯಗಳಲ್ಲಿ ಭಾಗಿಯಾಗಿದ್ದ ತಂಡ “ಗಾಯ್ ಪಾರ್ ದಿ” ತಂಡ ಕಟ್ಟಿಕೊಂಡು ಒಂಟಿ ಮನೆಗೆ ನುಗ್ಗಿ ದರೋಡೆ ಮಾಡುತ್ತಿತ್ತು. ವಿರೋಧ ವ್ಯಕ್ತಪಡಿದ್ರೆ ಮನೆ ಮಾಲೀಕರ ಕೈ ಕಾಲು ಕಟ್ಟಿ ಡಕಾಯಿತಿ ನಡೆಸಿದೆ.

ಇದೇ ತಂಡ 2023 ರಲ್ಲಿ ಗೋಕುಲ ಗ್ರಾಮದ ರಜನಿಕಾಂತ್ ದೊಡ್ಡಮನಿ ಎಂಬುವವರ ಮನೆಯ ಕಿಟಕಿ ಗ್ರಿಲ್ಸ್ ಕಟ್ ಮಾಡಿ ಒಳಗೆ ಹೋಗಿ ಗಂಡ ಹೆಂಡತಿ ಕೈ ಕಾಲು ಕಟ್ಟಿ ಹಾಕಿ ಸುಮಾರು 2 ಕೆಜಿಗೂ ಹೆಚ್ಚು ಚಿನ್ನಾಭರಣ ದೋಚಿದ್ದರು. ಆಗ ಸುನೀಲ್ ಚೌಹಾಣ್ ಎಂಬ ಓರ್ವ ಆರೋಪಿ ಬಂಧಿಸಲಾಗಿತ್ತು. ಈಗ ಬಂಧಿತನಾಗಿರುವ ಮಹೇಸ ಕಾಳೆ ಕೂಡ ಅದೇ ಗ್ಯಾಂಗ್ ಗೆ ಸೇರಿದವನ್ನು ಎಂದು ಮಾಹಿತಿ ನೀಡಿದರು.

ಇನ್ನೂ ನಾಲ್ಕೈದು ಜನ ಸಿಗಬೇಕಿದೆ. ವಿಚಾರಣೆ ಸಂದರ್ಭದಲ್ಲಿ ಬಂದರ ಟೀಂ ಕಳ್ಳತನ ‌ಮಾಡಿ ರೇವಡಿಹಾಳ ಬ್ರಿಡ್ಜ‌‌ ಬಳಿ ಸೇರಿ ಲಾರಿ ಮೂಲಕ ಬೆಳಗಾವಿ ಕಡೆ ಹೋಗಲು ಪ್ಲಾನ್ ಮಾಡಿತ್ತು. ಇತರೆ ಆರೋಪಿಗಳು ರೇವಡಿಹಾಳ ಬ್ರಿಡ್ಜ್‌ ಸುತ್ತ ಮುತ್ತ ಇರಬೇಕು ಎಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ನಮ್ಮ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆರೋಪಿ ಯತ್ನ ಮಾಡಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ತಂಡ ಊರ ಹೊರಗೆ ಇರುವ ಒಂಟಿ ಮನೆಗಳನ್ನು ಗುರುತಿಸಿ ಸಿಸಿಟಿವಿ ಇಲ್ಲದಂತ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಒಂದೆರಡು ಕಲ್ಲು ಹೊಡೆಯುತ್ತಾರೆ. ಆಗ ಮನೆ ಮಾಲೀಕರು ಕುಡುಕರು, ಪೋಲೀ ಹುಡುಗರ ಇರಬೇಕು ಅಂತ ಹೊರಗಡೆ ಬಂದಾಗ ಹಲ್ಲೆ ಮಾಡಿ ಮನೆ ಒಳಗೆ ನುಗ್ಗಿ ದರೋಡೆ ಮಾಡುವದು ಇವರ ಕಾರ್ಯವೈಖರಿ. ಬೆಳಗಾವಿ, ವಿಜಯಪುರ, ಗುಲಬರ್ಗಾ ಮುಂಬೈ ಕರ್ನಾಟಕ ಭಾಗದಲ್ಲಿ ಇವರು ಹೆಚ್ಚು ದರೋಡೆ ಮಾಡಿದ್ದಾರೆ. ಈಗಾಗಲೇ 18-20 ಜನರ ಹೆಸರನ್ನು ಬಾಯಿಬಿಟ್ಟಿದ್ದು, ಹೆಚ್ಚು ಪ್ರಕರಣಗಳು ಇನ್ನೂ ಪತ್ತೆಯಾಗಬೇಕಿದೆ.

ಗಾಯ್ ಪಾರ್ ದಿ ಗ್ಯಾಂಗ್..ಇವರು ಊರಲ್ಲಿ ಇರುವದಿಲ್ಲ. ಊರ ಹೊರಗಡೆ ದನಗಳನ್ನು ಕಟ್ಟಿಕೊಂಡು ಜೀವನ ಸಾಗಿಸುವವರಂತೆ ಬರುತ್ತಾರೆ. ವೃದ್ದರು, ಮಹಿಳೆಯರು, ಮಕ್ಕಳನ್ನು ಬಿಟ್ಟು ನೂರಾರು ಕಿಮೀ ವ್ಯಾಪ್ತಿಯ ಒಳಗೆ ಇಂತ ಕೃತ್ಯ ಮಾಡಿಕೊಂಡಿರುತ್ತಾರೆ.ಈ ತಂಡದ ಉಳಿದ ಸದಸ್ಯರ ಬಂಧನ ಮಾಡಲಾಗುವದು. ಆದ್ರೆ ಈ ಗ್ಯಾಂಗ್ ಕುಗ್ರಾಮಗಳಲ್ಲಿ ಇರುತ್ತಾರೆ. ಬಂಧಿಸಲು ಹೋದ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಆದಷ್ಟು ಬೇಗ ಉಳಿದ ಆರೋಪಗಳನ್ನು ಬಂಧಿಸುವದಾಗಿ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದರು.

   ವರದಿ:- ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!