Ad imageAd image

ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Bharath Vaibhav
ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ
WhatsApp Group Join Now
Telegram Group Join Now

ಹುಮ್ನಾಬಾದ್: –ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶಕ್ಕೆ ತಾಲೂಕಿನ ಕೇಶವ ಮಹಾರಾಜ್,ಡಾ.ಹಸನ್ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಬೀದರ್ ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಡಾ.ಹಸನ್,ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ ನೀಡಿದ್ದನ್ನು ವಿವರಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ನಂತರ ಗಣ್ಯರಾದ ಕೇಶವ ಮಹಾರಾಜ್, ಯೋಜನೆಯಿಂದ ತಾಲೂಕ ವ್ಯಾಪ್ತಿಯಲ್ಲಿ ಆಗಿರುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು.ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನ ಪ್ರಬಂಧಕರಾದ ಅವಿನಾಶ್ ಮೌರ್ಯ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಹಾಗೂ ಅದರ ಅವಶ್ಯಕತೆ ಅನಿವಾರ್ಯತೆಯ ಕುರಿತು ತಿಳಿಸಿದರು.

ನಂತರ ಜಿಲ್ಲಾ ನಿರ್ದೇಶಕರು ಕ್ಷೇತ್ರದ ಹಿನ್ನೆಲೆ,ಸ್ವ-ಸಹಾಯ ಸಂಘದ ಕಲ್ಪನೆ ಪ್ರಾರಂಭದ ಬಗ್ಗೆ,ಸಿಸಿ ಖಾತೆಯಲ್ಲಿ ಆಗುವ ವ್ಯವಹಾರಗಳ ಬಗ್ಗೆ,ತಗಲುವ ಬಡ್ಡಿಯ ಬಗ್ಗೆ.ಸಿ.ಸಿ ಖಾತೆಯ ನಿರ್ವಹಣೆ ಹಾಗೂ ಟರ್ಮ್ ಲೋನ್ ಗೂ ನಿರ್ವಹಣೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಕಚೇರಿಯ BC ವಿಭಾಗದ ಯೋಜನಾಧಿಕಾರಿಗಳು, ಬೀದರ್ ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿಗಳು, ಹುಮ್ನಾಬಾದ್ ಕ್ಷೇತ್ರ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಹಾಗೂ ಯೋಜನಾ ವ್ಯಾಪ್ತಿಯ ಒಕ್ಕೂಟಗಳ ಪದಾಧಿಕಾರಿಗಳು ಹಾಜರಿದ್ದರು.

ವರದಿ:-ಸಜೀಶ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!