Ad imageAd image

ಶ್ರೀ ಕಾಡಸಿದ್ದೇಶ್ವರ ಮಹಾರಥೋತ್ಸವ ನಿಮಿತ್ತ ಪ್ರಥಮ ಪುರಾಣ ಪ್ರವಚನ

Bharath Vaibhav
ಶ್ರೀ ಕಾಡಸಿದ್ದೇಶ್ವರ ಮಹಾರಥೋತ್ಸವ ನಿಮಿತ್ತ ಪ್ರಥಮ ಪುರಾಣ ಪ್ರವಚನ
WhatsApp Group Join Now
Telegram Group Join Now

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕಾಡಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೀ ಗುರು ಕಾಡಸಿದ್ದೇಶ್ವರರ ಪವಾಡಗಳನ್ನು ಕುರಿತ ಪ್ರಥಮ ವರ್ಷದ 12ನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮ ಗುರುವಾರ ರಾತ್ರಿ ಜರುಗಿತು.
ವೇದ ಮೂರ್ತಿ ಚಂದ್ರಯ್ಯ ಸ್ವಾಮಿ ಹಿರೇಮಠ ಅವರು ಮಾತನಾಡಿ ನೂರಾರು ವರ್ಷಗಳಿಂದ ಯುಗಾದಿ ಹಬ್ಬದಂದು ಜರುಗುತ್ತಾ ಬಂದಿರುವ ಮಹಾರಥೋತ್ಸವದಲ್ಲಿ ಹಲವಾರು ಪವಾಡ ಪುರುಷರು, ಶರಣರ ಪುರಾಣ ಪ್ರವಚನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಆದರೆ ಪ್ರಸಕ್ತ ವರ್ಷ ಕಾಡಸಿದ್ದೇಶ್ವರರ ಪವಾಡಗಳನ್ನೇ ಕುರಿತು ಶ್ರೀಮಠದ ಭಕ್ತಾದಿಗಳ ಆಸಕ್ತಿ ವಹಿಸಿ ನೀಡಿದ ದೇಣಿಗೆಯಿಂದ ಬಳಗಾನೂರು ವೇದ ಮೂರ್ತಿ ಶರಭಯ್ಯ ಶಾಸ್ತ್ರಿ ಅವರಿಂದ ರಚಿಸಿರುವ ಪುರಾಣ ಗ್ರಂಥವನ್ನು ರಚಿಸಲಾಗಿದೆ.
ಮಾರ್ಚ್ 16 ರಿಂದ ಪ್ರಾರಂಭವಾದ ಪುರಾಣವು ಮಾರ್ಚ್ 30ರ ಸಾಯಂಕಾಲ ಮಹಾಮಂಗಲವಾಗುತ್ತದೆ. ಪ್ರತಿದಿನ ಪುರಾಣ ಆಲಿಸಲು ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯಿರುತ್ತದೆ.

ಈ ಸಲ ನಡೆಯುವ ಅದ್ದೂರಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ನಂ-64 ಹಳೇಕೋಟೆ ಗ್ರಾಮದ ವೇದ ಮೂರ್ತಿ ಭೈರಾಪುರ ಚಂದ್ರಮೌಳಿ ಶಾಸ್ತ್ರಿಗಳಿಂದ ನಡೆದ 12ನೇ ದಿನದ ಪ್ರವಚನದಲ್ಲಿ ವೇದ ಮೂರ್ತಿ ವೀರಭದ್ರಯ್ಯ ಗವಾಯಿಗಳು ಪಠಣೆ ಮಾಡಿದರು. ಸುಧಾಕರ ಅವರು ತಬಲ ಸಾಥ್ ನೀಡಿದರು. ಇದೇ ವೇಳೆ ದಾಸೋಹ ದಾನಿಗಳು ಶ್ರೀ ಮಠದ ಭಕ್ತರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!