ಚಾಮರಾಜನಗರ: -ಬಿಸಿಲಿನ ತಾಪಮಾನದಿಂದ ಬಸವಳಿದ್ದ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವರುಣಾಗಮನದಿಂದಾಗಿ ತಂಪಿನ ವಾತಾವರಣ ಸೃಷ್ಟಿಯಾಗಿದೆ.
ಯುಗಾದಿ ಆದ ಬಳಿಕ ಮೊದಲ ಮಳೆಯಾಗಿದ್ದು, ಚಾಮರಾಜನಗರ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಚಾಮರಾಜನಗರ ತಾಲ್ಲೂಕಿನ ಕೆ.ಗುಡಿ, ಪಟ್ಟಣ ಸೇರಿದಂತೆ ಬಹುತೇಕ ಗ್ರಾಮಾಂತರ ಪ್ರದೇಶ, ಗುಂಡ್ಲುಪೇಟೆ ಪಟ್ಟಣ , ಬಂಡೀಪುರ, ಹಾಗೂ ಗ್ರಾಮಾಂತರ ಪ್ರದೇಶ, ಕೊಳ್ಳೇಗಾಲ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ, ಹನೂರು ತಾಲ್ಲೂಕಿನಾದ್ಯಂತ, ಯಳಂದೂರು ತಾಲ್ಲೂಕಿನ ಬಹುತೇಕ ಕಡೆ ಮಳೆಯಾಗುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲದೆ, ಜಿಲ್ಲೆಗೆ ಹೊಂದಿಕೊಂಡಂತ್ತಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನಲ್ಲೂ ಸಹ ಮಳೆಯಾಗುತ್ತಿದೆ. ವರ್ಷದ ಮೊದಲ ಮಳೆಯ ಹರ್ಷದಲ್ಲಿರುವ ಜನತೆಗೆ ಬಿಸಲಿನ ತಾಪಮಾನದಿಂದ ಬಸವಳಿದ್ದು, ಮಳೆಯಿಂದ ತುಸು ಹರ್ಷದಿಂದ ಇದ್ದಾರೆ.
ವರದಿ :ಸ್ವಾಮಿ ಬಳೇಪೇಟೆ