Ad imageAd image

ಚಾಂಪಿಯನ್ ಸ್ಕೂಲ್ ಬಟಗೇರಾ ಬಿ ಯಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಆಚರಣೆ

Bharath Vaibhav
ಚಾಂಪಿಯನ್ ಸ್ಕೂಲ್ ಬಟಗೇರಾ ಬಿ ಯಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಆಚರಣೆ
WhatsApp Group Join Now
Telegram Group Join Now

ಸೇಡಂ: ಸಲಾಂ ಹಿಂದುಸ್ತಾನ್ ಹೆಚ್,ಕೆ,ಜಿ,ಎಂ ಗ್ರಾಮೀಣ ಅಭಿವೃದ್ಧಿ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಿ ಸಂಸ್ಥೆ (ರಿ.) ಸಂಚಾಲಿತ
ಚಾಂಪಿಯನ್ ಲರ್ನಿಂಗ್ ಪ್ರೀ ಪೂರ್ವ – ಪ್ರಾಥಮಿಕ ಶಾಲೆ ಬಟಗೇರಾ ಬಿ ಯಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ನ ಖಜಾಂಚಿಗಳು ಮತ್ತು ಬಟಿಗೇರಾ ಬಿ ಗ್ರಾಮದ ಮುಖಂಡರಾದ ಶಿವಾರೆಡ್ಡಿ ಹೂವಿನಬಾವಿ ಮಾತನಾಡುತ್ತ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಎನ್ನುವುದು ಅತ್ಯವಶ್ಯಕ, ಪಾಲಕರು ಮಕ್ಕಳಿಗೆ ಕೇವಲ ಶಾಲೆಗೆ ಸೇರಿಸಿ ಬಿಡುವುದಲ್ಲ ಶಿಕ್ಷಕರ ಪಾಠವನ್ನು ಎಷ್ಟರಮಟ್ಟಿಗೆ ನಿಮ್ಮ ಮಕ್ಕಳು ಅರ್ಥ ಮಾಡಿಕೊಂಡಿದ್ದಾರೆ ಎಂಬುವುದನ್ನು ಪಾಲಕರು ಗಮನಿಸಬೇಕಿದೆ ಮಕ್ಕಳಿಗೆ ಒಳ್ಳೆ ಸಂಸ್ಕಾರವನ್ನು ನೀಡಿ ಈ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವುದು ಶಿಕ್ಷಕರ ಪಾತ್ರ ಮುಖ್ಯವಾದದ್ದು.
ಆಡಳಿತ ಮಂಡಳಿಯವರು ಅಚ್ಚುಕಟ್ಟಾಗಿ ಶಾಲೆಯನ್ನು ನಡೆಸುತ್ತಿದ್ದಾರೆ ಅದಕ್ಕೆ ಗ್ರಾಮದ ಸಮಸ್ತ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಅನುಕೂಲ ಪಡೆದುಕೊಳ್ಳಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬಂದ ಸೇಡಂ ಪೊಲೀಸ್ ಠಾಣೆಯ ಸಿಪಿಐ ಮಹಾದೇವಪ್ಪ ದಿಡ್ಡಿಮನಿ ಮಾತನಾಡಿ ಇಂದು ಸಮಾಜದಲ್ಲಿ ಚಿಕ್ಕ ಮಕ್ಕಳು ಮೊಬೈಲ್ ರೋಗಕ್ಕೆ ಬಲಿಯಾಗುತ್ತಿದ್ದಾರೆ ಪಾಲಕರು ಪ್ರಾರಂಭದಿಂದಲೇ ಮಕ್ಕಳಲ್ಲಿ ರಾಮಾಯಣ ಮಹಾಭಾರತ ಇತರೆ ನೀತಿ ಕಥೆಗಳ ಮೌಲ್ಯಗಳನ್ನು ತಿಳಿಸುತ್ತಾ ಮೊಬೈಲ್ ಜಗತ್ತಿನಿಂದ ಮಕ್ಕಳನ್ನು ಹೊರತಂದು ಪುಸ್ತಕ ಜಗತ್ತಿಗೆ ಅಂಟಿಕೊಳ್ಳುವಂತೆ ಪ್ರಯತ್ನಿಸಬೇಕು.
ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯುವ ವಯಸ್ಸಿನಿಂದಲೇ ಮಕ್ಕಳಲ್ಲಿ ಜ್ಞಾನಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಬೆಳೆಸಬೇಕು ಸಮಾಜ ಘಾತಕ ಚಟುವಟಿಕೆಗಳಿಂದ ಹೊರತರಲು ಶಿಕ್ಷಕರು ಮತ್ತು ಪಾಲಕರು ಪ್ರಯತ್ನಿಸಬೇಕು ಪ್ರಥಮ ವರ್ಷದಲ್ಲೇ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ, ಈ ಶಾಲೆಯ ಕೀರ್ತಿ ಸಮಾಜದ ಉದ್ದಕ್ಕೂ ಪಸರಿಸಲಿ ಎಂದರು.

ಸೇಡಂ ತಾಲೂಕಿನ ಕರವೇ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಮಾತನಾಡುತ್ತ ಚಾಂಪಿಯನ್ ಶಾಲೆಯು ಚಿಕ್ಕದಾಗಿದ್ದರೂ ಸಹ ಅಚ್ಚುಕಟ್ಟಾಗಿ ಆಡಳಿತ ಮಂಡಳಿಯವರು ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಕಡಿಮೆ ಶಾಲಾ ಫೀಸ್ ನಲ್ಲಿ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಪಾಲಕರು ಕಾಟಾಚಾರಕ್ಕೆ ಮಕ್ಕಳನ್ನು ಶಾಲೆಗೆ ಸೇರಿಸದೆ ಶಾಲಾ ಪ್ರಯತ್ನದಲ್ಲಿ ತಾವು ಭಾಗವಹಿಸಿ ಮಕ್ಕಳ ಸರ್ವೋತಮಕ ಬೆಳವಣಿಗೆಗೆ ಕಾಳಜಿಯಿಂದ ಪ್ರಯತ್ನಿಸಬೇಕು ಈ ಶಾಲೆಯಲ್ಲಿ ಓದಿದ ಮಕ್ಕಳು ಭವಿಷ್ಯತ್ ನಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಕಿತ್ತೂರಾಣಿ ಚೆನ್ನಮ್ಮ ಮುಂತಾದವರ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜ ಮುಖ್ಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸಮಾಜಮುಖಿಯಾಗಿ ಬೆಳೆಯಬೇಕು ಇಂದು ಕೇವಲ 30 ಮಕ್ಕಳಿಂದ ಪ್ರಾರಂಭವಾದ ಈ ಶಾಲೆ ಮುಂಬರುವ ದಿನಗಳಲ್ಲಿ 300 ಮಕ್ಕಳು ಪ್ರವೇಶ ಪಡೆದು ಮಾದರಿ ಶಾಲೆಯಾಗಿ ಹೊರಬರಲಿ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಕ್ರಿಯಾಶೀಲ ಷಟಸ್ಥಲ ಬ್ರಹ್ಮ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳು ಸುಕ್ಷೇತ್ರ ಪಂಚಗ್ರಹ ಹಿರೇಮಠ ದಿಗ್ಗಾವಿ ನಾಗವೇ ಬ್ರಹ್ಮಟ್ ಬಟಿಗೇರಾ ಬಿ ಇವರು ಮಾತನಾಡುತ್ತ ಇಂದಿನ ಆಧುನಿಕ ಯುಗದಲ್ಲಿ ಆಂಗ್ಲ ಭಾಷೆಯು ಅವಶ್ಯಕತೆವಾಗಿದ್ದರಿಂದ ಪಾಲಕರು ಆಂಗ್ಲ ಶಿಕ್ಷಣದ ಕಡೆ ಒಲವು ತೋರಿಸಿದ್ದಾರೆ ಆದರೆ ಇಂಗ್ಲಿಷ್ ಶಿಕ್ಷಣದ ಜೊತೆಗೆ ಮಾತೃಭಾಷೆ ಕನ್ನಡತ್ವವನ್ನು ಮರೆಯದೆ ಮಕ್ಕಳನ್ನು ಬೆಳೆಸಿ ಶಿಕ್ಷಣವನ್ನು ನೀಡಿ. ಉತ್ತಮವಾದ ಈ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಸೇರಿಸಿ. ಈ ಶಾಲಾ ಆಡಳಿತ ಮಂಡಳಿಯ ಪ್ರಯತ್ನ ಸಫಲವಾಗಲಿ ಈ ಶಾಲೆ ನಿರಂತರವಾಗಿ ಬೆಳೆಯಲಿ ಎಂದು ಆಶೀರ್ವಾದ ನುಡಿಗಳು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ನರಸಿಮ್ ಪಟೇಲ್ ಪ್ರಧಾನ ಕಾರ್ಯದರ್ಶಿಗಳು ಮತ್ತು ಮುಖ್ಯ ಗುರುಗಳು ಚಾಂಪಿಯನ್ ಸ್ಕೂಲ್ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ವೇದಮೂರ್ತಿ ರೇವಣಸಿದ್ದಯ್ಯ ಸ್ವಾಮಿ ಸ್ಥಾವರಮಠ ಬಟಗೇರಾ ಕೆ, ಬಸವರಾಜ್ ಸಾಗರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇಡಂ, ಶಿವಕುಮಾರ್ ಬಿ,ಆರ್,ಪಿ ಸೇಡಂ, ವರದ ಸ್ವಾಮಿ ಬಿ ಹಿರೇಮಠ ಜಿಲ್ಲಾ ಉಪಾಧ್ಯಕ್ಷರು ಜಯ ಕರ್ನಾಟಕ ಜನಪರ ವೇದಿಕೆ ಕಲಬುರ್ಗಿ, ವಿಜಯಕುಮಾರ್ ಜಿ ಸುರವಾರ ಅಧ್ಯಕ್ಷರು ವಿಶ್ವಜ್ಯೋತಿ ವಿದ್ಯಾಮಂದಿರ ಶಾಲೆ ಸೇಡಂ,ರುದ್ರಗೌಡ ಪಾಟೀಲ್, ಭೀಮರೆಡ್ಡಿ ಚಪೇಟ್ಲಾ ವರದಿಗಾರರು ಮತ್ತು ಗ್ರಂಥಪಾಲಕರು ಬಟಿಗೇರಾ ಬಿ , ಊರಿನ ಮುಖಂಡರಾದ ವೆಂಕಟರೆಡ್ಡಿ ಹಾಸನ್ ಪಲ್ಲಿ ಸೊಸೈಟಿ, ಸಂಜೀವ ರೆಡ್ಡಿ ಯಾನಗುಂದಿ, ನರಸಿಂಹ ಕುಲಕುರ್ಣಿ, ವೀರಭದ್ರಪ್ಪ ಕಲ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀ ಮಲ್ಕಪ್ಪ ಪೂಜಾರಿ, ಶ್ರೀಶೈಲ್ ಎಮ್ ಕೆ, ನರಸಿಂಹಲು ತೊಳಮಾಮಿಡಿ, ಚನ್ನಬಸಪ್ಪ ಸಂಕನೂರ್, ಸಂತೋಷ್ ಕುಮಾರ್, ಕೊಡಂಗಲ್ ಕರ್, ಶ್ರೀಶೈಲ್ ಸಾರಥಿ, ಅಮೀನ್ ಸಾಬ್ , ಶರಣಪ್ಪ ಹೊಸೂರ್, ಬಸವರಾಜ್ ಎಲ್ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ನಸೀಮ್ ಪಟೇಲ್ ಪ್ರಧಾನ ಕಾರ್ಯದರ್ಶಿಗಳು ಮುಖ್ಯ ಗುರುಗಳು ಚಾಂಪಿಯನ್ ಸ್ಕೂಲ್ ಇತರೆ ಗ್ರಾಮದ ಮುಖ್ಯಸ್ಥರು ಶಿಕ್ಷಕರು ಪಾಲಕರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಡಾ, ಅಲ್ಲಾಭಕ್ಷ್ ಎಲ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು, ಖಜಾಂಚಿಗಳಾದ ಉಮೇಶ್ ಕೊಡಂಗಲ್ ಪ್ರಾಸ್ತಾವಿಕ ಮಾತನಾಡಿದರು, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಆಡ್ಕಿ ಸ್ವಾಗತಿಸಿದರು, ಕಾರ್ಯದರ್ಶಿ ರಾಜು ಸಾಗರ್ ವಂದಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!