——————————————————————————–ವಿಶ್ವಕಪ್ ಟ್ವೆಂಟಿ- ಇಂದು ಮೊದಲ ಸೆಮಿಫೈನಲ್
ಕೋಲ್ಕತ್ತಾ: ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ಇಲ್ಲಿನ ಈಡೆನ್ ಗರ‍್ರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯಲಿದೆ.
ಪಂದ್ಯ ಸಾಯಂಕಾಲ ೭ ಕ್ಕೆ ಆರಂಭವಾಗಲಿದೆ. ಎರಡೂ ತಂಡಗಳು ಬಲಾಢ್ಯವಾಗಿವೆ. ದಕ್ಷಿಣ ಆಫ್ರಿಕಾ ಪಂದ್ಯಾವಳಿಯಲ್ಲಿ ಆಡಿದ ರೀತಿಯಿಂದ ಹಾಗೂ ಆಲ್‌ರೌಂಡರ್ ಗಳಿಂದ ತುಂಬಿರುವ ಕಾರಣಕ್ಕೆ ಗೆಲುವಿನ ನೆಚ್ಚಿನ ತಂಡ ಎನಿಸಿದೆ.
ಪಂದ್ಯದ ದಿನ ಯಾವ ತಂಡ ಒತ್ತಡ ನಿಭಾಯಿಸಿ ಉತ್ತಮ ಪ್ರರ‍್ಶನ ತೋರುವುದೋ ಆ ತಂಡಕ್ಕೆ ಗೆಲುವಿನ ನಗೆ ಸಿಗಲಿದೆ. ಆ ಮೂಲಕ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶವನ್ನೂ ಕೂಡ ಮಾಡಲಿದೆ.
ಎರಡನೇ ಸೆಮಿಫೈನಲ್ ಪಂದ್ಯ ಭಾರತ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವೆ ನಾಳೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ತಂಡಗಳು ಇಂತಿವೆ
ದ. ಆಫ್ರಿಕಾ: ಐಡೆನ್ ಮರ‍್ಕಮ್ (ನಾಯಕ) ಕುಂಟೇನ್ ಡೆಕಾಕ್, ರೇನ್ ರಿಕಲ್ಟನ್, ಡೆವಾಡ್ ಬ್ರೇವಿಸ್, ಡೆವಿಡ್ ಮಿಲ್ಲರ್, ಟ್ರಸ್ಟಿನ್ ಸ್ಟಬಸ್, ಮರ‍್ಕೋ ಜಾನ್ಸನ್, ಕರ‍್ಬಿನ್ ಬೌಚ್, ಕಗೀಸೋ ರಬಾಡಾ, ಕೇಶವ್ ಮಹಾರಾಜ್, ಲುಂಗಿನಿ ನಿಗಿಡಿ.
ನ್ಯೂಜಿಲೆಂಡ್: ಟಿಮ್ ಶೇರ‍್ಟ್, ಟಿಮ್ ಅಲೆನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ರಚಿನ್ ರವೀಂದ್ರ ಗ್ಲೇನ್ ಫಿಲಿಪ್ಸ್, ಡರೆಲ್ ಮಿಚೆಲ್, ಮರ‍್ಕ್ ಚಾಪಮನ್, ಕೊಲೆ ಮೆಕ್ನೋಯ್, ಜೇಮ್ಸ್ ನಿಶಾಮ್, ಮ್ಯಾಥ್ಯೂ ಹೆನರಿ, ಜಾಕೋಬ್ ಡಫಿ, ಇಶ್ ಸೋಧಿ, ಲೋಕೆ ರ‍್ಗೂಸನ್.




