ಮುಂಬೈ: ರಾಜಸ್ತಾನ ರಾಯಲ್ಸ್ ತಂಡ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಹನ್ನೊಂದನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ ಗಳ ವೀರೋಚಿತ ಗೆಲುವಿನೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಅಂಕ ಪಟ್ಟಿಯ ಖಾತೆಯನ್ನು ತೆರೆಯಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ತಾನ ರಾಯಲ್ಸ್ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ 182 ರನ್ ಗಳಿಸಿತು. 183 ರನ್ ಗಳ ಗೆಲುವಿನ ಗುರಿಯೊಂದಿಗೆ ಕಣಕ್ಕೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆ 176 ರನ್ ಗಳಿಸಲು ಮಾತ್ರ ಸಾಧ್ಯವಾಗಿ 6 ರನ್ ಗಳ ವಿರೋಚಿತ ಸೋಲು ಕಂಡಿತು. ಕೊನೆಯಲ್ಲಿ ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೆಜಾ ಗೆಲುವು ಸಂಪಾದಿಸಲು ಮಾಡಿದ ಉತ್ತಮ ಯತ್ನ ಫಲ ಕೊಡಲಿಲ್ಲ.
ಇದಕ್ಕೆ ಮುನ್ನ ಬ್ಯಾಟ್ ಮಾಡಿದ ರಾಜಸ್ತಾನ ರಾಯಲ್ಸ್ ಪರವಾಗಿ ನಿತೀಶ ರಾಣಾ ಅಕ್ಷರಸ ರನ್ ಸುರಿಮಳೆ ಗೈದರು. ಕೇವಲ 36 ಎಸೆತಗಳಲ್ಲಿ 10 ಬೌಂಡರಿ 5 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ಅವರ ಅತ್ಯಾಕರ್ಷಕ ಆಟದ ಫಲವಾಗಿ ರಾಜಸ್ತಾನ ರಾಯಲ್ಸ್ ಉತ್ತಮ ಮೊತ್ತ ಕಲೆ ಹಾಕಿತು.
ನಾಯಕ ರಿಯಾನ್ ಪರಾಗ್ 27 ಎಸೆಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಚೆನ್ನೈ ಪರ ನೂರ ಅಹ್ಮದ 28 ಕ್ಕೆ 2 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ:
ರಾಜಸ್ತಾನ ರಾಯಲ್ಸ್ 20 ಓವರುಗಳಲ್ಲಿ 9 ವಿಕೆಟ್ ಗೆ 182
ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆ 176
ಋತುರಾಜ ಗಾಯಕ್ವಾಡ 63, 44 ಎಸೆತ, 7 ಬೌಂಡರಿ, 1 ಸಿಕ್ಸರ್
ವಾನಿಂದು ಹಸರಂಗ 35 ಕ್ಕೆ 4, ಪಂದ್ಯ ಶ್ರೇಷ್ಠ: ನಿತೀಶ ರಾಣಾ