Ad imageAd image

ಗೋಕಾಕ್ ನಲ್ಲಿ ಕೋಟಾ ನೋಟು ಪ್ರಿಂಟ್ : ಐವರು ಅರೆಸ್ಟ್

Bharath Vaibhav
ಗೋಕಾಕ್ ನಲ್ಲಿ ಕೋಟಾ ನೋಟು ಪ್ರಿಂಟ್ : ಐವರು ಅರೆಸ್ಟ್
WhatsApp Group Join Now
Telegram Group Join Now

ಬೆಳಗಾವಿ : ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಪೊಲೀಸರು ಪತ್ತೆ ಮಾಡಿದ್ದೂ, ಸೀನಿಮಿಯ ರೀತಿಯಲ್ಲಿ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ್ ಮಹ್ಮದ್ ಸಲೀಂ ಯಾದವಾಡ, ಮಹಾಲಿಂಗಪುರದ ಸದ್ದಾಂ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ಒನಶೆಣವಿ ಮತ್ತು ವಿಠ್ಠಲ ಹನುಮಂತ ಹೊಸಕೋಟಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 29ರಂದು ಗೋಕಾಕ್​-ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಬಳಿ ಗಸ್ತು ಪೊಲೀಸರು ಕಾರೊಂದನ್ನು ತಡೆದು ತಪಾಸಣೆ ಮಾಡಿದಾಗ 100, 500 ರೂ. ಮುಖಬೆಲೆಯ 6,792 ನಕಲಿ ನೋಟುಗಳು ಪತ್ತೆಯಾಗಿದ್ದವು. ಕೂಡಲೇ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅರಭಾವಿ ಗ್ರಾಮದ‌ ಮನೆಯೊಂದರಲ್ಲಿ ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದರು. ಮುಧೋಳ, ಮಹಲಿಂಗಪುರ, ಗೋಕಾಕ್​, ಹಿಡಕಲ್, ಬೆಳಗಾವಿ, ಧಾರವಾಡ ಸೇರಿ ಮತ್ತಿತರ ಕಡೆಗಳಲ್ಲಿ ಈ ನೋಟುಗಳನ್ನು ಚಲಾಯಿಸಿ ವಂಚಿಸುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!