Ad imageAd image

ಪಂಚ ಗ್ಯಾರಂಟಿಗಳು ರಾಜ್ಯದ ಪ್ರಗತಿಗೆ ಹೊಸ ದಿಕ್ಸೂಚಿ : ಪ್ರಕಾಶ ಹುಕ್ಕೇರಿ

Bharath Vaibhav
ಪಂಚ ಗ್ಯಾರಂಟಿಗಳು ರಾಜ್ಯದ ಪ್ರಗತಿಗೆ ಹೊಸ ದಿಕ್ಸೂಚಿ : ಪ್ರಕಾಶ ಹುಕ್ಕೇರಿ
WhatsApp Group Join Now
Telegram Group Join Now

ಚಿಕ್ಕೋಡಿ : ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿಗಳು ರಾಜ್ಯದ ಪ್ರಗತಿಗೆ ಹೊಸ ದಿಕ್ಸೂಚಿಯಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹೊಸ ಗ್ಯಾರಂಟಿಗಳು ಜಾರಿಯಾಗಲಿದ್ದು ದೇಶವೇ ಸಮೃದ್ಧಿಯಾಗಲಿದೆ. ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ ಎಂದು ಪ್ರಕಾಶ ಹುಕ್ಕೇರಿ ಅವರು ಮತದಾರರಲ್ಲಿ ಮನವಿ ಮಾಡಿದರು.

ಮೇ ೭ ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರದ ಅಂಗವಾಗಿ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಇಂಗಳಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ ಪ್ರಚಾರ ಸಭೆ ಜರುಗಿತು.

ಈ ವೇಳೆ ಮಾತನಾಡಿದ ಪ್ರಕಾಶ ಹುಕ್ಕೇರಿ ಅವರು ನಮ್ಮ ಕ್ಷೇತ್ರದಲ್ಲಿ ಈ ಭಾಗದ ಶಾಸಕರಾದ ಗಣೇಶ ಹುಕ್ಕೇರಿ ಅವರ ಸಹಯೋಗದಲ್ಲಿ ಸವಳು ಜವಳು ಭೂಮಿ ಸಮಸ್ಯೆ ನೀಗಿಸಲು ಸಾಕಷ್ಟು ಅನುದಾನ ತಂದು ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ. ಪ್ರವಾಹ ಸಮಸ್ಯೆಯಿಂದಾಗಿ ಹಾನಿಯಾದ ಸಾವಿರಾರು ಮನೆಗಳ ಪುನರ್ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಲು ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಎಂದು ಕೇಳಿಕೊಂಡರು.

ಈ ವೇಳೆ ಗಣಪತಿ ಧನವಾಡೆ, ಶಿವಾಜಿ ಪವಾರ, ರಮೇಶ ಮುರಚುಟ್ಟೆ, ಸುರೇಶ ಧಾಕನಾಯಿಕ, ಶುಭಾಶ ಉಣ್ಣಾಲೆ, ಮೋಹನ ಪಾಠೋಲೆ, ಗಣಪತಿ ಮಾನೆ, ಹೂವನ್ನಾ ಚೌಗಲೆ, ದಾದಾ ಮಾಳಿ, ಶಶಿಕಾಂತ ಧನವಾಡೆ, ಶಾಂತಿನಾಥ ಪಣದೆ, ಬಾಬು ಮಿರ್ಜೆ, ಚಂದ್ರು ಲಂಗೋಟೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!