Ad imageAd image

ಐದು ಗ್ಯಾರಂಟಿಗಳು ನಮ್ಮನ್ನು ಕೈಹಿಡಿದಿದ್ದಾವೆ :- ಶಿವ ಶಂಕರಗೌಡ

Bharath Vaibhav
ಐದು ಗ್ಯಾರಂಟಿಗಳು ನಮ್ಮನ್ನು ಕೈಹಿಡಿದಿದ್ದಾವೆ :- ಶಿವ ಶಂಕರಗೌಡ
WhatsApp Group Join Now
Telegram Group Join Now

ಲಿಂಗಸೂರ:-  ಮುದಗಲ್ಲ ಪಟ್ಟಣದಲ್ಲಿ ಯಾದಗಿರಿ ರಾಯಚೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಅವರು ಜಯಗಳಿಸಿದ್ದಕ್ಕೆ ಮುದಗಲ್ಲ ಪೋಲಿಸ್ ಠಾಣೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕೈ ಕಾರ್ಯಕರ್ತರು.

ನಂತರ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶಿವ ಶಂಕರ್ ಗೌಡ ಅವರು ಮಾತನಾಡಿ ನಮ್ಮ ಕಾಂಗ್ರೆಸ್ ಸರಕಾರದ ಐದು ಗ್ಯಾರಂಗಳು ನಮ್ಮನ್ನು ಕೈಹಿಡಿದಿದ್ದಾವೆ. ಅಭ್ಯರ್ಥಿಗಳ ಪರವಾಗಿ ಹಗಲು ಇರುಳು ಎನ್ನದೇ ಶ್ರಮಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರಿಗೆ ಹಾಗೂ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಶ್ರಮದ ಪ್ರತಿ ಫಲ ದಿಂದ ಅಧಿಕ ಮತಗಳು ಕ್ಷೇತ್ರದಲ್ಲಿ ಬಂದಿವೆ ಎನ್ನಬಹುದು ಹಾಗೂ ಕ್ಷೇತ್ರದ ಮತದಾರಿಗೆ ಮತ್ತು ಊರಿನ ಹಿರಿಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಹಾಗೇ ನೂತನ ಲೋಕಸಭಾ ಸದಸ್ಯರಾದ ಜಿ ಕುಮಾರ್ ನಾಯಕ್  ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಜೀ ಕುಮಾರ್ ನಾಯಕ್ ಅವರು ಮುನ್ನಡೆಯಿದ್ದ ವೇಳೆಯಲ್ಲೇ ನೀನೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ವಿವಿಧ ಬೀದಿಗಳಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೈಕ್ ರ‌್ಯಾಲಿ ನಡೆಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೇಕ್ ದಾವಸಾಬ್ ಪುರಸಭೆ ಸದಸ್ಯರಾದ ಅಜ್ಮೀರ್ ಬೆಳ್ಳಿಕಟ್, ಎಸ್ ಆರ್ ರಸೂಲ್, ಮೈಬೂಬ ಬಾರಿಗಡ, ಮೈಬು ಸಾಬ್ ಕಡ್ಡಿಪುಡಿ, ಶಿವ ನಾಗಪ್ಪ ಬಡ ಕುರಿ, ಡಾಕ್ಟರ್ ಅಯ್ಯಪ್ಪ ಬನಿಗೋಳ್, ಶರಣಪ್ಪ ಕಟ್ಟಿಮನಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು,ಬಸವರಾಜ ಬಂಕದಮನಿ, ಕೃಷ್ಣ ಚಲವಾದಿ, ಸಂಗಪ್ಪ ಹಿರೇಮನಿ, ನಾಗರಾಜ್ ದಪೇದರ್,ಸಂಜೀವ್ ಹಂಚಿನಾಳ, ರಮೇಶ್ ಚಲವಾದಿ ,ರಘುವೀರ್ ಹುಲುಗಪ್ಪ ಚಲವಾದಿ ಇತರರು ಉಪಸ್ಥಿತರಿದ್ದರು.‌

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!