Ad imageAd image

ಸಿದ್ದಲಿಂಗಪ್ಪ ಬಣದ ಐವರು ಅವಿರೋಧ ಆಯ್ಕೆ

Bharath Vaibhav
ಸಿದ್ದಲಿಂಗಪ್ಪ ಬಣದ ಐವರು ಅವಿರೋಧ ಆಯ್ಕೆ
WhatsApp Group Join Now
Telegram Group Join Now

——————————————–ಟಿಎಪಿಎಸಿಎಂಎಸ್ ಚುನಾವಣೆ 

ತುರುವೇಕೆರೆ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ “ಎ” ತರಗತಿ ಸದಸ್ಯರ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ) ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಬಣದ ಐದು ಮಂದಿ ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪವಿಧಿ ಪ್ರಕಾರ ಆಡಳಿತ ಮಂಡಳಿಗೆ 15 ಮಂದಿ ನಿರ್ದೇಶಕರ ಸ್ಥಾನವಿದ್ದು, ಈ ಪೈಕಿ 12 ಮಂದಿ ನಿರ್ದೇಶಕರನ್ನು ಮಾತ್ರ ಚುನಾವಣೆ ಮೂಲಕ ಆಯ್ಕೆ ಮಾಡಬೇಕಿದೆ. ಎ ತರಗತಿಯ 5 ಸ್ಥಾನ, ಹಾಗೂ ಬಿ ತರಗತಿ (ರೈತರು, ಕೃಷಿಕ ಸದಸ್ಯರಿಂದ) 7 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಅಕ್ಟೋಬರ್ 18 ರಂದು ಕಡೆಯ ದಿನಾಂಕವಾಗಿತ್ತು. ಎ ತರಗತಿಯ 5 ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಐದು ಮಂದಿಯೂ ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಅಧಿಕೃತ ಘೋಷಣೆಯಷ್ಟೇ ಹೊರಬೀಳಬೇಕಿದೆ.

ಬಿ ತರಗತಿಯ 7 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು, 25 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 20 ಕಡೆಯ ದಿನಾಂಕವಾಗಿದ್ದು, ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ ಅಕ್ಟೋಬರ್ 26 ರಂದು ನಡೆಯಲಿದೆ. ಎ ತರಗತಿಯ 5 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಗಳು ಅಕ್ಟೋಬರ್ 26 ರಂದು ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ.

ಎ ತರಗತಿಯ 5 ಸ್ಥಾನಗಳಿಗೆ ಮುಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮೋಹನ್ ಕುಮಾರ್ ವಿ.ಜಿ., ಗೋಣಿತುಮಕೂರು ಸಹಕಾರ ಸಂಘದಿಂದ ಹರ್ಷಿತ್ ಗೌಡ ಆರ್., ಬಾಣಸಂದ್ರ ಸಹಕಾರ ಸಂಘದಿಂದ ನಿಜಗುಣಮೂರ್ತಿ, ಕಣತೂರು ಸಹಕಾರ ಸಂಘದಿಂದ ನಾಗರಾಜು ಕೆ.ಎಲ್., ದಬ್ಬೇಘಟ್ಟ ಸಹಕಾರ ಸಂಘದಿಂದ ಬಾಲಕೃಷ್ಣೇಗೌಡ ಡಿ.ಆರ್. ನಾಮಪತ್ರ ಸಲ್ಲಿಸಿದ್ದಾರೆ. ೫ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವ ಕಾರಣ ಈ ಐದು ಮಂದಿ ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಆದರೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. 5 ಮಂದಿ ಅವಿರೋಧ ಆಯ್ಕೆಯಾಗುವ ಮೂಲಕ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲೀಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಅವರ ಬಣ ಮೇಲುಗೈ ಸಾಧಿಸಿದಂತಾಗಿದೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಮಾತನಾಡಿ, ತುರುವೇಕೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 15 ಮಂದಿ ನಿರ್ದೇಶಕರ ಪೈಕಿ 12 ಮಂದಿ ನಿರ್ದೇಶಕರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ತಾಲೂಕಿನ ವಿವಿಧ ಸಹಕಾರ ಸಹಕಾರ ಸಂಘಗಳಿಂದ ಆಯ್ಕೆಯಾಗುವ ಎತರಗತಿಯ 5 ಸ್ಥಾನಗಳಿಗೆ ನಮ್ಮ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ರೈತರು, ಕೃಷಿಕರಿಂದ ಆಯ್ಕೆಯಾಗುವ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮತದಾರ ಬಂಧುಗಳು ಅಲ್ಲೂ ಸಹ ನಮ್ಮ ಬೆಂಬಲಿಗರ ತಂಡವನ್ನೇ ಆಯ್ಕೆ ಮಾಡಿ ಆರ್ಶೀವದಿಸುವ ವಿಶ್ವಾಸವಿದೆ. ಅವಿರೋಧವಾಗಿ ಆಯ್ಕೆಯಾಗಿರುವ ಐದೂ ಮಂದಿ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ತುರುವೇಕೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಮೋಹನ್ ಕುಮಾರ್ ವಿ.ಜಿ., ಹರ್ಷಿತ್ ಗೌಡ ಆರ್., ನಿಜಗುಣಮೂರ್ತಿ, ನಾಗರಾಜು ಕೆ.ಎಲ್., ಬಾಲಕೃಷ್ಣೇಗೌಡ ಡಿ.ಆರ್. ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಆಯ್ಕೆಯಾದ ಐವರು ನೂತನ ನಿರ್ದೇಶಕರನ್ನು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್ ಗೌಡ, ಮುಖಂಡರಾದ ಬಿಗನೇನಹಳ್ಳಿ ರವಿಕುಮಾರ್, ರುದ್ರೇಶ್, ತಿಮ್ಮೇಶ್, ಗವಿರಂಗಪ್ಪ, ಡಿ.ಪಿ.ರಾಜು, ರಮೇಶ್, ನಂಜುಂಡಪ್ಪ, ಶ್ರೀಕೃಷ್ಣ(ಅಜ್ಜಪ್ಪ), ಮಂಜುನಾಥ್ (ದೊಡ್ಡಮನೆ), ಹುಚ್ಚೇಗೌಡ, ಶಂಕರಣ್ಣ, ಚಿಕ್ಕರಂಗೇಗೌಡ ಸೇರಿದಂತೆ ನೂರಾರು ಮಂದಿ ಅಭಿನಂದಿಸಿದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!