ಸೇಡಂ: ತಾಲೂಕಿನ ರಂಜೋಳ ಗ್ರಾಮದ ಒಂದೇ ಕುಟುಂಬದ ಐವರು ಆತ್ಮಹತ್ಯಾ ಮಾಡಿಕೊಂಡಿರುವ ಘಟನೆ ಹೈದರಬಾದ್ ನಲ್ಲಿ ನಡೆದಿದೆ. ಮೃತರ ಸಮೀಪದ ತೆಲಂಗಾಣ ರಾಜ್ಯದ ರಾಜದಾನಿ ಆಗಿರುವ ಹೈದರಬಾದ್ ನಗರಕ್ಕೆ ವಲಸೆ ಹೋಗಿದ್ದರು.
ಹೈದರಬಾದ್ ನಲ್ಲಿ ಮಿಯಾಪೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮುಕ್ತಮಹಬೂಬ್ ಪೇಟೆಯಲ್ಲಿ ನಿವಾಸಿಸುತ್ತಿದ್ದರು.
ಒಂದೇ ಕುಟುಂಬದ ಲಕ್ಷ್ಮಯ್ಯ (60), ವೆಂಕಟಮ್ಮ (55), ಅಳಿಯ ಅನಿಲ್ (40), ಮಗಳು ಕವಿತಾ (38), ಮೊಮ್ಮಗಳು ಅಪ್ಪು (2), ಇವರು ಅನುಮಾನಾಸ್ಪದವಾಗಿ ಮರಣ ಹೊಂದಿದ್ದಾರೆ. ಈ ಕುರಿತು ಹೈದರಬಾದ್ ನ ಮಿಯಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತರನ್ನು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ರಂಜೊಳ್ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಪುಟ್ಟ ಮಗುವಿನ ಪ್ರಾಣ ತೆಗೆದು ನಂತರ ಕುಟುಂಬ ಸಮೇತ ವಿಷ ಕುಡಿದಿದ್ದಾರೆ ಎಂದು ಪೊಲೀಸ್ ತಿಳಿಸಿದರೆ. ಇನ್ನೂ ಮುಂದಿನ ತನಿಖೆ ನಡೆಯಲಿದೆ ಎಂದು ಮಾಧಪುರ ಪಿಎಸ್ಐ ತಿಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




