Ad imageAd image

ರಾಜ್ಯದಲ್ಲಿಂದು ಹೃದಯಾಘಾತಕ್ಕೆ ಐವರು ಬಲಿ 

Bharath Vaibhav
WhatsApp Group Join Now
Telegram Group Join Now

ಹಾಸನ : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲದೇ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ 45 ದಿನಗಳಲ್ಲಿ ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.ಅಲ್ಲದೇ ಇಂದು ಒಂದೇ ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಐವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹಾಸನ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪಿದ್ದಾನೆ. 21 ವರ್ಷದ ಮದನ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮೃತ ಮದನ್ ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.

ತಾಯಿ ಜೊತೆ ಚನ್ನಪಟ್ಟಣದಲ್ಲಿ ಮದನ್ ವಾಸವಾಗಿದ್ದ 2 ದಿನದ ಹಿಂದೆ ಚಿಕ್ಕಕೊಂಡಗುಳದ ಭಾವನ ಮನೆಗೆ ಬಂದಿದ್ದ ಈ ವೇಳೆ ನಿನ್ನೆ ರಾತ್ರಿ ಎದೆನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಮೂಲಕ ಹಾಸನ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

ಇನ್ನು ಹಾಸನದಲ್ಲಿ ಮತ್ತೋರ್ವ ವೃದ್ದೆ ಹೃದಯಾಘಾತಕ್ಕೆ ಬಲಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಲೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ರಾಜಮ್ಮ ಮೃತ ದುರ್ದೈವಿ. ಜೂನ್ 14ರಂದು ಮನೆಯಲ್ಲಿ ಅಡಿಗೆ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ರಾಜಮ್ಮ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭಟನೆಯಲ್ಲಿ ಪಾಲ್ಕೊಳ್ಳಲು ಬಂದ ರೈತ ‘ಹೃದಯಘಾತಕ್ಕೆ’ ಬಲಿ!

ಬೆಂಗಳೂರಲ್ಲಿ ಭೂ ಸ್ವಾಧೀನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಚಾಮರಾಜನಗರದಿಂದ ರೈತರೊಬ್ಬರು ಬಂದಿದ್ದಾರೆ. ಈ ವೇಳೆ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದ್ದು, ಹೃದಯಾಘಾತಕ್ಕೆ ರೈತ ಈಶ್ವರ (50) ಸಾವನ್ನಪ್ಪಿದ್ದಾರೆ. ಇವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ನಿವಾಸಿಯಾಗಿದ್ದಾರೆ.

ಇಂದು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ರೈಲು ಇಳಿದು ಫ್ರೀಡಂ ಪಾರ್ಕ್ ಗೆ ತೆರಳುತ್ತಿದ್ದರು. ಮೆಜೆಸ್ಟಿಕ್ ರೈಲು ನಿಲ್ದಾಣದ ರಸ್ತೆಯಲ್ಲಿಯೇ ಈಶ್ವರ ಕುಸಿದು ಬಿದಿದ್ದಾರೆ. ಧರಣಿಯಲ್ಲಿ ಪಾಲ್ಗೊಳ್ಳುವ ತೆರಳುವಾಗ ರೈತ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾರೆ.

ಪೊಲೀಸರು ಸಿಪಿಆರ್ ಮಾಡಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು ಅಪೋಲೋ ಆಸ್ಪತ್ರೆಗೆ ಸಾಗಿಸುವಾಗಲೇ ಮಾರ್ಗ ಮಧ್ಯೆ ರೈತ ಸಾವನಪ್ಪಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಹೃದಯಘಾತದಿಂದ ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ.

ಕುಸಿದುಬಿದ್ದು ಮಹಿಳೆ ಸಾವು

ಮನೆಯಲ್ಲಿಯೇ ಕುಸಿದು ಬಿದ್ದು ಹೃದಯಾಘಾತವಾಗಿ ಮಹಿಳೆ ಸಾವನಪ್ಪಿದ್ದಾರೆ 55 ವರ್ಷದ ಬಿಎನ್ ವಿಮಲಾಗೆ ಹೃದಯ ಸ್ತಂಭನವಾಗಿದೆ. ಹಾಸನದ ದಾಸರ ಕೊಪ್ಪಲಿನಲ್ಲಿ ವಿಮಲಾ ದುರ್ಮರಣ ಹೊಂದಿದ್ದಾರೆ.

ನಿನ್ನೆ ರಾತ್ರಿ ಮನೆಯಲ್ಲಿದ್ದಾಗಲೇ ಹೃದಯಘಾತವಾಗಿದೆ. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಾಗಲೇ ಬಿ ಎಂ ವಿಮಲಾ ಸಾವನ್ನಪ್ಪಿದ್ದಾರೆ. ಹಾಸನದ ದಾಸನಕೊಪ್ಪಲಿನಲ್ಲಿ ಈ ಒಂದು ಘಟನೆ ನಡೆದಿದೆ.

ಪಾತ್ರೆ ತೊಳೆಯುವಾಗಲೇ ಹೋಯ್ತು ಜೀವ!

ಹೌದು ಪಾತ್ರೆ ತೊಳೆಯುತ್ತಿದ್ದಾಗಲೇ ಹೃದಯಘಾತದಿಂದ ಮಹಿಳೆಯ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಳೆಹೊನ್ನಗ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಹೃದಯಘಾತದಿಂದ ಕುಸಿದು ಬಿದ್ದು ಶೀಲಾ (45) ಸಾವನಪ್ಪಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!