ಸೇಡಂ: ತಾಲೂಕಿನ ರಂಜೋಳ ಗ್ರಾಮದ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿದ ಕಾರಣ ಆ ಕುಟುಂಬವು ಬಡಕುಟುಂಬವಾಗಿದ್ದು. ನೇರೆರಾಜ್ಯದ ಹೈದರಬಾದ್ ಗೆ ಬದುಕಲು ಹೋಗಿ ಈ ಒಂದು ದುರಂತ ಸಂಭವಿಸಿರುತ್ತದೆ. ಮಾನ್ಯ ಮಿಯಾಪುರ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವುದಾಗಿ ಗ್ರಾಮಸ್ಥರ ಮನವಿ ಮಾಡಿದ್ದಾರೆ.
ಆ ಕುಟುಂಬವು ತುಂಬಾ ನಿರ್ಗತಿಕ ಕುಟುಂಬವಾಗಿದ್ದು ಆ ಮೃತರನ್ನು ಮಣ್ಣು ಮಾಡಲು ಕೂಡ ಹಣ ಇರುವುದಿಲ್ಲ ಗ್ರಾಮದ ಎಲ್ಲಾ ಮುಖಂಡರು ಸೇರಿ ಹಣ ಜಮಾ ಮಾಡಿ ಕಾರ್ಯಕ್ರಮವನ್ನು ಮುಗಿಸಿಕೊಡುತ್ತಿದ್ದೇವೆ ಆದ್ದರಿಂದ ಆ ಕುಟುಂಬದ ಓರ್ವ ವ್ಯಕ್ತಿಯಾದ ಲಕ್ಷ್ಮಯ್ಯ ನವರ ಮಗ ಮಾತ್ರ ಜೀವಂತವಾಗಿದ್ದಾರೆ ಅವರಿಗೆ ಸರಕಾರ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಅವರು ಮಾತನಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




